ಬೆಂಗಳೂರು: 2023 ರ ವಿಧಾನಸಭಾ ಚುನಾವಣೆ ಪ್ರಯುಕ್ತ ಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿಗೆ ಬಿಜೆಪಿ ಕಾರ್ಯಕರ್ತರು ಅಡ್ಡಿ ಮಾಡಿರುವ ಘಟನೆ ಬೆಂಗಳೂರಿನ ಹೆಬ್ಬಾಳದಲ್ಲಿ ನಡೆದಿದೆ. ಹೆಬ್ಬಾಳ ಕ್ಷೇತ್ರದ ಗಂಗಾನಗರ ವಾರ್ಡ್ ನಲ್ಲಿ ಪ್ರಚಾರ ಮಾಡುವ ವೇಳೆ ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೈರತಿ ಸುರೇಶ್ ಗೆ ಅಡ್ಡಿ ಮಾಡಲಾಗಿದೆ. ಮಾಜಿ ಬಿಬಿಎಂಪಿ ಸದಸ್ಯ ನಾಗರಾಜ್ ಎಸ್ ಕೆ ಪುತ್ರ ಪ್ರವೀಣ್ ಮಚ್ಚು ಅಪ್ಪಿ ಎಂಬುವವರಿಂದ ಅಡ್ಡಿ ಮಾಡಲಾಗಿದ್ದು,
ನೀವು ಇಲ್ಲಿ ಪ್ರಚಾರ ಮಾಡಬಾರದು. ನೀವ್ಯಾರು ಇಲ್ಲಿ ಬರಬಾರದು ಎಂದು ಬಿಜೆಪಿ ನಾಯಕರು ಧಮ್ಕಿ ಹಾಕಿದ್ದಾರೆ. ಇನ್ನೂ ಇದೇ ವೇಳೆ ಬಿಜೆಪಿ ಹಾಗು ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿರುವ ಘಟನೆ ಕೂಡ ಜರುಗಿತು. ಇನ್ನೂ 2023 ರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಮೂರು ಪಕ್ಷಗಳು ತೀವ್ರ ಪೈಪೋಟಿ ನಡೆಸುತ್ತಿವೆ.