ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವೆಡೆ(Bangalore Traffic) ಇಂದು ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ವಿವಿಐಪಿ ಭೇಟಿ ಇರುವ ಹಿನ್ನಲೆಯಲ್ಲಿ ಮಧ್ಯಾಹ್ನ 3 ರಿಂದ 7 ಗಂಟೆಯವರೆಗೆ ಕೆಲವು ರಸ್ತೆಗಳಲ್ಲಿ ಪ್ರಯಾಣ ಮಾಡುವುದರ ಬದಲಿಗೆ ಪರ್ಯಾಯ ಮಾರ್ಗಗಳನ್ನು ಬಳಸಿ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಸಂಚಾರ ಪೊಲೀಸರು ಪ್ರಯಾಣಿಕರಿಗೆ ಸೂಚಿಸಿದ್ದಾರೆ. ಹಳೆ ವಿಮಾನ ನಿಲ್ದಾಣ ರಸ್ತೆ- ಕೇಂಬ್ರಿಡ್ಜ್ ಲೇಔಟ್ ರಸ್ತೆ-ಡಿಕನ್ಸನ್ ರಸ್ತೆ-ಕಬ್ಬನ್ ರಸ್ತೆ, ಎಎಸ್ಸಿ ಸೆಂಟರ್, ಡಿ ಸೋಜಾ ಸರ್ಕಲ್, ವೆಲ್ಲರಾ ಜೆಎನ್, ಹೊಸೂರು ಲಷ್ಕರ್ ರಸ್ತೆ, ಆನೆಪಾಳ್ಯ, ಆಡುಗೋಡಿ ಮುಖ್ಯ ರಸ್ತೆ ಸಿಲ್ಕ್ ಬೋರ್ಡ್ ವರೆಗೆ ,
ಡಾ ಮರಿಗೌಡ ರಸ್ತೆ- ಹೊಸೂರು ಲಷ್ಕರ್ ರಸ್ತೆ- ಮಡಿವಾಳ ಮುಖ್ಯ ರಸ್ತೆ-ಸರ್ಜಾಪುರ ಜಂಕ್ಷನ್- ಸಿಲ್ಕ್ ಬೋರ್ಡ್ ಜಂಕ್ಷನ್- ಹೊರ ವರ್ತುಲ ರಸ್ತೆ- ತಾವರೆಕೆರೆ ಜಂಕ್ಷನ್ ಗಳಲ್ಲಿ ಸಂಚಾರ ವ್ಯತ್ಯಯವಾಗಲಿದೆ. ಪ್ರಯಾಣಕ್ಕಾಗಿ ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳುವಂತೆ ನಗರದ ಟ್ರಾಫಿಕ್ ಪೊಲೀಸರು ಸೂಚನೆ ನೀಡಿದ್ದಾರೆ.
ಡಾ. ಹೆಚ್.ಮರಿಗೌಡ ರಸ್ತೆಯಿಂದ ಮಡಿವಾಳ ಚೆಕ್ ಪೋಸ್ಟ್ ಕಡೆಗೆ ಬರುವ ಪ್ರಯಾಣಿಕರನ್ನು ಡೈರಿ ವೃತ್ತದಲ್ಲಿ ಡೈವರ್ಡ್ ಮಾಡಲಾಗುತ್ತಿದ್ದು ಪ್ರಯಾಣಿಕರು ಬನ್ನೇರುಘಟ್ಟ ರಸ್ತೆ ಕಡೆಗೆ ಬಲ ತಿರುವುದು ತೆಗೆದುಕೊಳ್ಳಬೇಕಾಗುತ್ತದೆ. ಹೊಸೂರಿನಿಂದ ಬೆಂಗಳೂರು ನಗರದ ಕಡೆಗೆ ಹೋಗುವ ವಾಹನಗಳನ್ನು ಕೋನಪ್ಪನ ಅಗ್ರಹಾರ ಜಂಕ್ಷನ್ನಲ್ಲಿ ಡೈವರ್ಟ್ ಮಾಡಲಾಗುತ್ತಿದೆ ಮತ್ತು ಎಡ ತಿರುವು ಪಡೆದು ನೈಸ್ ರಸ್ತೆಯ ಕಡೆಗೆ ಚಲಿಸಿ ಬನ್ನೇರುಘಟ್ಟ ರಸ್ತೆ ಅಥವಾ ಕನಕಪುರ ರಸ್ತೆಗೆ ತಲುಪಬೇಕು ಎಂದು ತಿಳಿಸಿದೆ.