ಕಲಬುರಗಿ: ಚುನಾವಣೆಗೆ ಇನ್ನು ಕೇವಲ 8 ದಿನವಷ್ಟೇ ಬಾಕಿಯಿದ್ದು, ಇಂದು ಕಲಬುರಗಿ (Kalaburagi) ಜಿಲ್ಲೆಗೆ ಪ್ರಧಾನಿ ಮೋದಿ (PM Narendra Modi) ಎಂಟ್ರಿ ನೀಡಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪ್ರಭಾವ ಇರುವ ಕಲ್ಯಾಣ ಕರ್ನಾಟಕದಲ್ಲಿ ಮೋದಿ ಪ್ರಚಾರ ನಡೆಸಿ ಧೂಳೆಬ್ಬಿಸಲು ಬಿಜೆಪಿ ಪ್ಲಾನ್ ಮಾಡಿದೆ.
ಕಲಬುರಗಿ ರೋಡ್ ಶೋ ವೇಳೆ ಖರ್ಗೆಗೆ ಮತ್ತೆ ಕೌಂಟರ್ ಕೊಡಲು ಮೋದಿ ಪ್ಲಾನ್ ಮಾಡಿದ್ದು ಮತ್ತೊಮ್ಮೆ ವಿಷಸರ್ಪ ಹೇಳಿಕೆಗೆ ಮೋದಿಯಿಂದ ತಿರುಗೇಟು ನಿರೀಕ್ಷೆ ಇದೆ. ಕಲ್ಯಾಣ ಕರ್ನಾಟಕದಲ್ಲಿ ಗರಿಷ್ಠ ಕ್ಷೇತ್ರಗಳನ್ನು ವಶಕ್ಕೆ ಪಡೆಯಲು ಬಿಜೆಪಿ ಪಣ ಹೊಂದಿದ್ದು, ಲಿಂಗಾಯತರ ಪ್ರಾಬಲ್ಯದ ಜತೆಗೆ ಎಸ್ಸಿ, ಎಸ್ಟಿ ಇತರೇ ಹಿಂದುಳಿದ ವರ್ಗಗಳ ಅಹಿಂದ ಮತಗಳು ನಿರ್ಣಾಯಕವಾಗಲಿದೆ. ಇಂದು ಕಲಬುರಗಿ ಬಳಿಕ, ಮೇ 6 ರಂದು ಚಿತ್ತಾಪುರಗಳಲ್ಲಿ ಮೋದಿ ಮತಬೇಟೆ ನಡೆಸಲಿದ್ದಾರೆ.
ಕಲ್ಯಾಣ ಜಿಲ್ಲೆಗಳ 40 ಕ್ಷೇತ್ರಗಳಲ್ಲಿ ಕಾಂಗ್ರೆಸ್ನ 25 ಕೋಟೆಗಳ ವಶಕ್ಕೆ ಬಿಜೆಪಿ ತಂತ್ರ ಹೂಡಿದೆ. ಹಳೇ ಮೈಸೂರು ಬಳಿಕ ಕಲ್ಯಾಣ ಕರ್ನಾಟಕವೇ ನಮೋ ಟಾರ್ಗೆಟ್ ಆಗಿದೆ. ಕಲ್ಯಾಣ ಕರ್ನಾಟಕದ ಹಿನ್ನೆಡೆಯೂ ಬಹುಮತ ತಲುಪಲು ಅಡ್ಡಿಯಾಗಿತ್ತು.ಹೀಗಾಗಿ ಕಲ್ಯಾಣ ಭಾಗದದಲ್ಲಿ ಕಾಂಗ್ರೆಸ್ ಮತ ಬುಟ್ಟಿಗೆ ಮೋದಿ ಕೈಹಾಕಿದ್ದಾರೆ.ಪ್ರಸ್ತುತ ಕಲ್ಯಾಣ ಕರ್ನಾಟಕದಲ್ಲಿ 40 ಕ್ಷೇತ್ರಗಳಿದ್ದು ಪ್ರಸ್ತುತ 17 ಬಿಜೆಪಿ ಶಾಸಕರಿದ್ದಾರೆ. ಈ ಬಾರಿ ಕನಿಷ್ಟ 25 ಕ್ಷೇತ್ರಗಳನ್ನು ಗೆಲ್ಲಬೇಕೆಂಬ ಗುರಿಯನ್ನು ಬಿಜೆಪಿ ಹಾಕಿಕೊಂಡಿದೆ.
ಎಲ್ಲಿ ಕಾರ್ಯಕ್ರಮ?
ಬಳಗ್ಗೆ 11 ಗಂಟೆಗೆ ಚಿತ್ರದುರ್ಗದಲ್ಲಿ ಸಾರ್ವಜನಿಕ ಸಭೆಯಲ್ಲಿ ಮೋದಿ ಭಾಗವಹಿಸಲಿದ್ದು, ಮಧ್ಯಾಹ್ನ 2 ಗಂಟೆಗೆ ಹೊಸಪೇಟೆ, ಸಂಜೆ 4 ಗಂಟೆಗೆ ರಾಯಚೂರಿನ ಸಿಂಧನೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಸಂಜೆ 6:30ಕ್ಕೆ ಕಲಬುರಗಿಯಲ್ಲಿ ರೋಡ್ ಶೋ ನಡೆಯಲಿದೆ.