ಅಮೆರಿಕದಲ್ಲಿ ಬಂದೂಕು ಸಂಸ್ಕೃತಿಯ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಬಂದೂಕು ಹೊಂದಿರುವ ವ್ಯಕ್ತಿಗಳು ಎಲ್ಲೆಂದರಲ್ಲಿ ಶೂಟ್ ಮಾಡಿ ಅದೆಷ್ಟೋ ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿದ್ದಾರೆ. ಹೀಗಾಗಿ ಇದೀಗ ಅಮೆರಿಕಾ ಪೊಲೀಸರು ವಿಭಿನ್ನ ಪ್ರಯತ್ನದ ಮೊರೆ ಹೋಗಿದ್ದಾರೆ.
ಪ್ರಜೆಗಳು ತಮ್ಮಲ್ಲಿರುವ ಗನ್ ಕೊಟ್ಟರೆ ಗಿಫ್ಟ್ ಕಾರ್ಡ್ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ. ಪರಿಣಾಮವಾಗಿ ಸಾವಿರಾರು ನಾಗರಿಕರು ಮುಂದೆ ಬಂದು ತಮ್ಮ ಶಸ್ತ್ರಾಸ್ತ್ರಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
ನ್ಯೂಯಾರ್ಕ್ ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ಅವರ ನಿರ್ದೇಶನದಲ್ಲಿ ಕಾರ್ಯಕ್ರಮವನ್ನು ನಡೆಯುತ್ತಿದ್ದು, ಇದುವರೆಗೂ ಮೂರು ಸಾವಿರಕ್ಕೂ ಹೆಚ್ಚು ಗನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಇದು 185 ಭಾರೀ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಪ್ರತಿ ಬಂದೂಕನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಎಂದರೆ ದುರಂತದ ಸಾಧ್ಯತೆಯನ್ನು ತೊಡೆದುಹಾಕುವುದು ಎಂದು ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ಟ್ವೀಟ್ ಮಾಡಿದ್ದಾರೆ. ಬಂದೂಕು ಹಿಂಸಾಚಾರದಿಂದ ನ್ಯೂಯಾರ್ಕ್ ನಿವಾಸಿಗಳನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಶಸ್ತ್ರಾಸ್ತ್ರವನ್ನು ಒಪ್ಪಿಸುವವರು $500 ಮೌಲ್ಯದ ಉಡುಗೊರೆ ಕಾರ್ಡ್ಗಳನ್ನು ಸ್ವೀಕರಿಸುತ್ತಾರೆ (ಹ್ಯಾಂಡ್ ಗನ್, ಅಸಾಲ್ಟ್ ರೈಫಲ್, ಘೋಸ್ಟ್ ಗನ್, ಶಾಟ್ ಗನ್, 3D ಮುದ್ರಿತ ಗನ್). ಮೊದಲಾದವು ಸೇರಿವೆ.
ಅತಿ ಹೆಚ್ಚು 751 ಶಸ್ತ್ರಾಸ್ತ್ರಗಳು ಸಿರಾಕ್ಯೂಸ್ ನಗರದಿಂದ ಬಂದಿವೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಈ ಪ್ರದೇಶದ ವ್ಯಕ್ತಿಯೊಬ್ಬರು ಏಕಕಾಲದಲ್ಲಿ 5 ಸಾವಿರ ಡಾಲರ್ ವರೆಗೆ ಗಿಫ್ಟ್ ಕಾರ್ಡ್ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.