ಚೆನ್ನೈ: ಬಹುಭಾಷಾ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಅವರ ಪುತ್ರಿ ಆವಂತಿಕಾ ಸದ್ಯ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಹಾಟ್ ಫೋಟೋಗಳು ಸಖತ್ ವೈರಲ್ ಆಗಿದೆ. ಈ ಮೂಲಕ ಟೀಕಾಕಾರರಿಗೆ ಆವಂತಿಕಾ ತಿರುಗೇಟು ನೀಡಿದ್ದಾರೆ.
ಈ ಹಿಂದೆ ಆವಂತಿಕಾ ಸಾಕಷ್ಟು ದಪ್ಪಗಿದ್ದ ಕಾರಣದಿಂದ ಅಪಹಾಸ್ಯಕ್ಕೆ ಗುರಿಯಾಗಿದ್ದರು. ಇದೀಗ ಈಕೆ ಸಖತ್ ಸ್ಲೀಮ್ ಆಗಿದ್ದು ಬೋಲ್ಡ್ ಫೋಟೋಗಳ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದಾರೆ.
ಖುಷ್ಬೂ ಅವರು ಸಹ ಈ ಹಿಂದೆ ದಪ್ಪಗಿದ್ದರು. ಅವರು ಕೂಡ ಸುಮಾರು 20 ಕೆಜಿ ತೂಕ ಇಳಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಇದೀಗ ಅಮ್ಮನಂತೆ ಮಗಳು ಕೂಡ ಸ್ಲಿಮ್ ಆಗಿದ್ದಾರೆ. ಆವಂತಿಕಾ ಅವರು ಖುಸ್ಬೂ ಸುಂದರ್ ಮತ್ತು ನಿರ್ದೇಶಕ ಸುಂದರ್ ಸಿ ಅವರ ಪುತ್ರಿ. ಖುಷ್ಬೂ ಜತೆಗೆ ಆವಂತಿಕಾ ಕೂಡ ದಡೂತಿ ದೇಹದಿಂದ ಒಂದು ಕಾಲದಲ್ಲಿ ಟ್ರೋಲಿಗರಿಗೆ ದಾಳವಾಗಿದ್ದರು. ಇಗ ಅದೇ ಟೀಕಾಕಾರರು ಅಮ್ಮ-ಮಗಳ ದೇಹ ಪರಿವರ್ತನೆ ಕಂಡು ಹುಬ್ಬೇರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಖುಷ್ಬೂ ಮಗಳು ಸಿನಿಮಾ ಲೋಕಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರ್ತಿದ್ದು ಈ ಬಗ್ಗೆ ಖುಷ್ಭೂ ಆಗಲಿ ಆವಂತಿಕಾ ಆಗಲಿ ಯಾವುದೇ ಮಾಹಿತಿ ನೀಡಿಲ್ಲ.