ರಾಮನಗರ: 25 ವರ್ಷಗಳಿಂದ ಬೇರೆ ಕಡೆಯಿಂದ ಬಂದವರಿಗೆ ಅವಕಾಶ ನೀಡಿ ಆಗಿದೆ ಈ ಬಾರಿ ಇದೇ ಕ್ಷೇತ್ರದ ಸ್ಥಳೀಯ ವ್ಯಕ್ತಿಗೆ ಅವಕಾಶ ನೀಡುವಂತೆ ವಿಧಾನಪರಿಷತ್ ಮಾಜಿ ಸದಸ್ಯ ಮರಿಲಿಂಗೇಗೌಡ ಮನವಿ ಮಾಡಿದರು.
ಹಾರೋಹಳ್ಳಿ ತಾಲೂಕು ರಾಮಸಾಗರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ದೇಶಕ್ಕೆ ನರೇಂದ್ರ ಮೋದಿ ಮತ್ತು ರಾಜ್ಯಕ್ಕೆ ಬಸವರಾಜ್ ಬೊಮ್ಮಾಯಿ ಅವರ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಈ ಭಾರೀ ರಾಮನಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ಗೌತಮ್ ಗೌಡ ಸ್ಪರ್ಧೆ ಮಾಡಿದ್ದು ಒಂದು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಕಳೆದ 30 ವರ್ಷದಿಂದ ಅಧಿಕಾರ ಅನುಭವಿಸಿದವರು ಜಿಲ್ಲೆಗೆ ಏನೇನು ಮಾಡಿಲ್ಲ ಜನರನ್ನು ಮರಳು ಮಾಡುತ್ತಲೇ ಕಾಲವನ್ನು ಕಳೆದಿದ್ದಾರೆ ಈ ಬಾರಿ ಸ್ಥಳೀಯ ಯುವಕನಿಗೆ ಅವಕಾಶ ನೀಡುವ ಮೂಲಕ ಕ್ಷೇತ್ರ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕು ಎಂದರು.
ಕ್ಷೇತ್ರದಾದ್ಯಂತ ಜೆಡಿಎಸ್ ಪಕ್ಷದ ಕಾರ್ಯಕರ್ತರು ಕುಟುಂಬ ರಾಜಕಾರಣಕ್ಕೆ ಬೇಸತ್ತು ಬಿಜೆಪಿಗೆ ಸೇರುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ದೇಶ ಹಾಗೂ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದು ಮೋದಿ ಹಾಗೂ ಬೊಮ್ಮಾಯಿ ಅವರ ಕೆಲಸಗಳಿಗೆ ನಿಮ್ಮ ಮತ ನೀಡುವ ಮೂಲಕ ಇನ್ನಷ್ಟು ಕೆಲಸ ನಿರ್ವಹಿಸುವಂತೆ ಉತ್ತೇಜಿಸಬೇಕು ಎಂದರು.
ಇದೆ ವೇಳೆ ಕೊಳ್ಳಿಗನಹಳ್ಳಿ ಗ್ರಾಮ ಪಂಚಾಯಿತಿಯ ರಾಮಸಾಗರ ಹಾಗೂ ದಾಸೇಗೌಡನ ದೊಡ್ಡಿಯಲ್ಲಿ ಹಲವಾರು ಜೆಡಿಎಸ್ ಕಾರ್ಯಕರ್ತರು,ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡರು.
ಬಿಜೆಪಿ ಎಸ್ ಸಿ ಮೋರ್ಚ ರಾಜಕಾರಣಿ ಸದಸ್ಯ ರಾಮಸಾಗರ ಕೃಷ್ಣ,ವಕೀಲ ರಾಜು, ಅಂಜನಪ್ಪ, ನರಸಿಂಹಯ್ಯ, ರಾಜು, ಶ್ರೀನಿವಾಸ, ಸೇರಿದಂತೆ ಇನ್ನಿತರರು ಹಾಜರಿದ್ದರು.