ವಿಜಯನಗರ: ಪಕ್ಷೇತರ ಅಭ್ಯರ್ಥಿ ಎಂ.ಪಿ ಲತಾ ಈ ಭಾರಿ ಹರಪ್ಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸಂಚಲನವನ್ನೆ ಸೃಷ್ಟಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಹಲವು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದ ಲತಾ ಅವರು ಕೊನೆ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿತು.
ಕ್ಷೇತ್ರದಲ್ಲಿ ಸಾಮಾಜಿಕವಾಗಿ ಜನಗಳ ಕಣ್ಮಣಿಯಾಗಿರುವ ಎಂ.ಪಿ ಲತಾ ಅವರು ಸ್ವಾಭಿಮಾನದ ಅಸ್ತ್ರ ಬಳಸಿದ್ದಾರೆ, ಈ ಭಾರಿ ನನಗೆ ಕ್ಷೇತ್ರದ ಜನಗಳು ಕೈ ಹಿಡಿಯುತ್ತಾರೆ ಎಂಬ ವಿಶ್ವಾಸ ಇದೆ ನಮ್ಮ ತಂದೆಯವರಾದ ದಿಂವಗತ ಎಂ.ಪಿ ಪ್ರಕಾಶ ಹಾಗು ನನ್ನ ಸಹೋದರ ದಿವಂಗತ ಎಂ.ಪಿ ರವಿಯವರು ಕ್ಷೇತ್ರದಲ್ಲಿ ಹಲವಾರು ಕೆಲಸ ಕಾರ್ಯಗಳನ್ನ ಮಾಡಿದ್ದಾರೆ.
Video Player
00:00
01:24
ಅದರ ಮುಂದುವರಿದ ಭಾಗವಾಗಿ ನಾನು ಈ ಕ್ಷೇತ್ರದ ಜನಗಳ ಕಲ್ಯಾಣಕ್ಕಾಗಿ ನಾನು ಶ್ರಮವಹಿಸುವೆ, ನಾನು ಯಾವುದೆ ಪಕ್ಷದವರನ್ನ ಟಿಕಿಸಲು ಹೋಗುವುದಿಲ್ಲ ನನ್ನ ಧ್ಯೇಯ ನನ್ನ ಗೆಲವು, ಕ್ಷೇತ್ರದ ಜನಗಳ ಕಲ್ಯಾಣವಾಗಬೇಕು, ನಾನು ಜನಗಳ ಮಧ್ಯೆ ಇರುವವಳು ಅವರ ಅಣತಿಯಂತೆ ನಡೆಯುತ್ತೆನೆ, ಯಾವುದೆ ಕಾರಣಕ್ಕೂ ಅವರ ನಿರ್ಧಾರವಾಗಿರುತ್ತದೆ ಎಂದರು.