ಬೆಂಗಳೂರು: ಜೆಡಿಎಸ್ ಕಾಂಗ್ರೆಸ್ನ ‘ಬಿ’ ಟೀಂ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನ ಪದ್ಮನಾಭ ನಗರದ ನಿವಾಸದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಯಂಗ್ಸ್ಟರ್. ಅವರು ಬೇಕಾದರೆ ಏನಾದರೂ ಮಾತನಾಡಲಿ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದರು.
ಕಳೆದ ಬಾರಿ ರಾಹುಲ್ ಗಾಂಧಿ ಜೆಡಿಎಸ್ ಬಿಜೆಪಿಯ ‘ಬಿ’ ಟೀಂ ಎಂದು ಹೇಳಿದ್ದರು. ಈ ಬಾರಿ ಮೋದಿ ಅವರು ಹೇಳಿದ್ದಾರೆ. ಮೋದಿ ಅವರು ಎತ್ತರಕ್ಕೆ ಬೆಳೆದ ನಾಯಕ. ಅವರು ಹಾಗೆ ಮಾತಾಡೋದು ಸರಿನಾ? ಅವರಿಗೆ ಬಿಡ್ತೀನಿ. ರಾಹುಲ್ ಗಾಂಧಿ ಯಂಗ್ಸ್ಟರ್, ಅವರು ಬೇಕಾದ್ರೆ ಏನಾದ್ರು ಮಾತಾಡಲಿ. ಮೋದಿ ಅವರು ಹಾಗೆ ಹೇಳಿದ್ದನ್ನು ಅವರಿಗೆ ಬಿಡ್ತೀನಿ.
ನಾನೇನು ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಾನು ಏನು ಮಾಡಿದ್ದೇನೆ ಎಂದು ಇಡೀ ರಾಷ್ಟ್ರಕ್ಕೆ ಗೊತ್ತು. ಮುಸ್ಲಿಂ ಮೀಸಲಾತಿ, ಮಹಿಳೆಯರ ಮೀಸಲಾತಿ, ವಾಲ್ಮೀಕಿ ಮೀಸಲಾತಿ, ಈದ್ಗಾ ವಿಚಾರ ಏನೇನು ಮಾಡಿದ್ದೇನೆ ನೋಡಲಿ. ದೊಡ್ಡವರ ಹೇಳಿದ್ದಾರೆ ಹೇಳಲಿ. ಅವರ ಬಗ್ಗೆ ನಾನು ಟೀಕೆ ಮಾಡುವುದಿಲ್ಲ ಎಂದು ತಿರುಗೇಟು ನೀಡಿದರು