ಬೆಂಗಳೂರು: ವಿಜಯನಗರ ಕ್ಷೇತ್ರದ ದೀಪಾಂಜಲಿ ನಗರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ವಿರುದ್ಧ ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ್ (Aswath Narayan)ಅವರು ವಾಗ್ದಾಳಿ ನಡೆಸಿದ್ದಾರೆ. ಕುಟುಂಬ ರಾಜಕಾರಣದ ವಿರುದ್ಧವಾಗಿದ್ದು, ಜನ ಸಮುದಾಯಗಳ ಪರವಾಗಿರುವ ಬಿಜೆಪಿಗೆ ಈ ಬಾರಿ ಸ್ಪಷ್ಟ ಜನಾದೇಶ ಕೊಡುವ ಮೂಲಕ ಬೆಂಗಳೂರು ಮತ್ತು ಕರ್ನಾಟಕದ ಸರ್ವಾಂಗೀಣ ಪ್ರಗತಿಗೆ ಜತೆಯಾಗಿ ನಿಲ್ಲಬೇಕು” ಎಂದು ಕರೆ ಕೊಟ್ಟರು. ಹೋದ ಬಾರಿ ಬಿಜೆಪಿಗೆ(BJP) ಸ್ವಲ್ಪದರಲ್ಲಿ ಸ್ಪಷ್ಟ ಬಹುಮತ ತಪ್ಪಿತು.
ಕಾಂಗ್ರೆಸ್ ಮತ್ತು ಜೆಡಿಎಸ್ (jds)ಅಪವಿತ್ರ ಮೈತ್ರಿ ಮಾಡಿಕೊಂಡು ಜನಾದೇಶವನ್ನೇ ಧಿಕ್ಕರಿಸಿದವು. ಆದರೆ, ಬಿಜೆಪಿ ತನಗೆ ಸಿಕ್ಕಿದ ಮೂರೂವರೆ ವರ್ಷಗಳ ಅವಕಾಶದಲ್ಲಿ ಕೋವಿಡ್, ಅತಿವೃಷ್ಟಿಯಂತಹ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದೆ. ಡಬಲ್ ಎಂಜಿನ್ ಸರ್ಕಾರದಿಂದ ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಪರ್ವವೇ ಸೃಷ್ಟಿಯಾಗಿದೆ ಎಂದು ಅಶ್ವಥ್ ನಾರಾಯಣ್ ಅವರು ಹೇಳಿದ್ದಾರೆ.