ಚುನಾವಣೆಯಲ್ಲಿ (Election) ಗೆಲ್ಲುವುದಕ್ಕೆ ಜೆಡಿಎಸ್ ಅಭ್ಯರ್ಥಿ(JDS Candidate) ಅಡ್ಡದಾರಿ ಹಿಡಿದ್ರಾ? ಎಂಬ ಅನುಮಾನ ಕಾಡತೊಡಗಿದೆ. ಹೌದು ಚುನಾವಣೆಯಲ್ಲಿ ಗೆಲ್ಲಲು ಜೆಡಿಎಸ್ ಅಭ್ಯರ್ಥಿ ತನ್ನನ್ನೇ ತಾವೇ ಅಪಹರಣಕ್ಕೆ(Kidnap Plan) ಮಾಡಿಸಿಕೊಳ್ಳಲು ಮುಂದಾಗಿದ್ದ ಪ್ಲ್ಯಾನ್ ಬಹಿರಂಗಗೊಂಡಿದೆ.
ಯಲಹಂಕ ಜೆಡಿಎಸ್ ಅಭ್ಯರ್ಥಿ ಮುನೇಗೌಡ(Munegowda, JDS Candidate) ಕಿಡ್ನ್ಯಾಪ್ ಸ್ಕೆಚ್ ಬಹಿರಂಗಗೊಂಡಿದೆ. ಚುನಾವಣೆಯಲ್ಲಿ ಅನುಕಂಪ ಗಿಟ್ಟಿಸಿಕೊಳ್ಳಲು ಮುನೇಗೌಡ ತನ್ನನ್ನು ತಾನೇ ಕಿಡ್ನ್ಯಾಪ್ ಮಾಡಿಕೊಳ್ಳಲು ಮುಂದಾಗಿದ್ದರು.
ಡಿಕೆಶಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ಗೆ ರಣಹದ್ದು ಡಿಕ್ಕಿ: ಗ್ಲಾಸ್ ಪುಡಿ ಪುಡಿ, ತಪ್ಪಿದ ಭಾರೀ ಅನಾಹುತ
ತಾನು ಕಿಡ್ನ್ಯಾಪ್ ಆಗಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ (Vishwanath, BJP Candidate) ಮೇಲೆ ಹಾಕಿ ಯಲಹಂಕ ಕ್ಷೇತ್ರದಲ್ಲಿ ಗಲಾಟೆ ಮಾಡಿಸಲು ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿ ತಿಳಿದು ಬಂದಿದೆ. ಜೆಡಿಎಸ್ ಅಭ್ಯರ್ಥಿ ಮುನೇಗೌಡ ಹಾಗೂ ಪಕ್ಷದ ವಕ್ತಾರ ಚರಣ್ ಗೌಡ ಅನಾಮಧೇಯ ವ್ಯಕ್ತಿಯೊಂದಿಗೆ ಸ್ಕೆಚ್ ಮಾತುಕತೆ ಹಾಗೂ ಮೇ 5 ಅಥವಾ 6 ರಂದು ತಾವೇ ನೇಮಿಸಿಕೊಂಡ ಹುಡಗರಿಂದ ಅಪಹರಣ ಮಾಡಿಸಿಕೊಳ್ಳಲು ಮಾತುಕತೆಯ ವಿಡಿಯೋ ಲೀಕ್ ಆಗಿದೆ. ಇನ್ನೂ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.