ಕಲಬುರಗಿ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ (Bajrang Dal) ನಿಷೇಧ ಉಲ್ಲೇಖ, ಈ ಬಗ್ಗೆ ಬಿಜೆಪಿ ಹೇಳಿಕೆ ವಿಚಾರವಾಗಿ ಕಲಬುರಗಿ ನಗರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಮಾತನಾಡಿದ್ದು‘ ಪ್ರತಿ ಪಕ್ಷದವರು ಸಹಜವಾಗಿ ಒಬ್ಬರ ಮೇಲೆ ಒಬ್ಬರು ಹೇಳುತ್ತಾರೆ, ಅದೇ ರೀತಿ ಕಾಂಗ್ರೆಸ್ ಪ್ರಣಾಳಿಕೆ ಜಾರಿಮಾಡಲು ಆಗಲ್ಲ ಎಂದು ಹೇಳುತ್ತಿದ್ದಾರೆ. ಕಳೆದ ಬಾರಿ ಕೂಡ ಇದೇ ರೀತಿ ಹೇಳಿದ್ದರು. ಆದ್ರೆ, ಕಳೆದ ಬಾರಿ ನಾವು ನೀಡಿದ್ದ ಆಶ್ವಾಸನೆಗಳನ್ನ ಈಡೇರಿಸಿದ್ದೆವು. ಬಜೆಟ್ ಅನುದಾನ, ಆದಾಯ ನೋಡಿಯೇ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಅವರು ಹೇಳುತ್ತಾ ಹೋಗ್ತಾರೆ, ಆದ್ರೆ, ನಾವು ಮಾಡಿ ತೋರಿಸುತ್ತಿದ್ದೇವೆ ಎಂದರು.
ಇನ್ನು ಬಜರಂಗದಳ ಬ್ಯಾನ್ ವಿಚಾರ ‘ ಅದರ ಬಗ್ಗೆ ಪ್ರಣಾಳಿಕೆ ಅಧ್ಯಕ್ಷರು ಸ್ಪಷ್ಪನೆ ನೀಡಿದ್ದಾರೆ. ಹೀಗಾಗಿ ಅದರ ಬಗ್ಗೆ ಚರ್ಚೆ ಮಾಡಲು ಹೋಗಲ್ಲ. ರಾತ್ರಿ ಎಲ್ಲರೂ ಮಟನ್ ತಿಂತಾರೆ, ಹಗಲೊತ್ತಿನಲ್ಲಿ ನಾನ್ ವೆಜಟರಿಯನ್ಗೆ ಬೈಯ್ತಾರೆ. ಈ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಾರೆ. ಜನರ ಭಾವನಾತ್ಮಕ ವಿಚಾರಗಳ ಜೊತೆ ಆಟವಾಡಿದ್ರೆ ಅಭಿವೃದ್ಧಿ ಆಗಲ್ಲ. ಬಿಜೆಪಿ ಭಾವನಾತ್ಮಕ ವಿಚಾರಗಳನ್ನ ಮುಂದಿಟ್ಟು ಪ್ರಚಾರ ಮಾಡುತ್ತೆ, ಜಗಳ ಹಚ್ಚಿಯೇ ಓಟ್ ತೆಗದುಕೊಳ್ಳುವುದು ಸರಿಯಲ್ಲ ಎಂದು ಬಿಜೆಪಿಗೆ ಹೇಳಿದರು.
ಅವಕಾಶ ಕೊಟ್ಟು ನೋಡಿ ಹೇಗೆ ಪ್ರಣಾಳಿಕೆ ಜಾರಿ ಮಾಡ್ತೇವೆ
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಜನಪರ ಘೋಷಣೆಗಳ ಕುರಿತು ‘ಪರೀಕ್ಷೆಗೆ ಮೊದಲೇ ಪರೀಕ್ಷೆ ಹೇಗೆ ಬರೆಯುತ್ತೀರಾ ಅಂದ್ರೆ ಹೇಗೆ? ಅವಕಾಶ ಕೊಟ್ಟು ನೋಡಿ ಹೇಗೆ ಪ್ರಣಾಳಿಕೆ ಜಾರಿ ಮಾಡ್ತೇವೆ ಅಂತ ಗೊತ್ತಾಗುತ್ತೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಬಿಜೆಪಿ ಏನು ಮಾಡಿಲ್ಲ. ಆದರೆ ಈಗ ಪ್ರಚಾರಕ್ಕೆ ಬರುತ್ತಿದ್ದಾರೆ. ನಾವು ಮಂಜೂರು ಮಾಡಿದ್ದ ರೈಲಿಗೆ ಬಣ್ಣ ಬಳಿದು ಹೊಸ ರೈಲು ಅಂದ್ರು,ಕೆಲವರು ಪ್ರಚಾರದಿಂದಲೇ ಎಲ್ಲ ಸಿಗುತ್ತೆ ಅಂದುಕೊಂಡಿದ್ದಾರೆ ಎಂದು ಬಿಜೆಪಿ ವಿರುದ್ದ ಹರಿಹಾಯ್ದರು.