ದೊಡ್ಡಬಳ್ಳಾಪುರ: ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದ ಅಲ್ಪಸಂಖ್ಯಾತರ ಘಟಕದ 25ಕ್ಕೂ ಹೆಚ್ಚು ಜೆಡಿಎಸ್ ಮುಖಂಡರು ಬುಧವಾರ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡರ ನೇತೃತ್ವದಲ್ಲಿ ಮತ್ತೆ ಮಾತೃ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂಧರ್ಭದಲ್ಲಿ ಹರೀಶ್ ಗೌಡ ಮಾತನಾಡಿ 25 ಕ್ಕೂ ಹೆಚ್ಚು ಅಲ್ಪಸಂಖ್ಯಾತ ಮುಖಂಡರು ಮತ್ತೆ ಮಾತೃ ಪಕ್ಷಕ್ಕೆ ಮರಳಿದ್ದಾರೆ.. ಕಾಂಗ್ರೆಸ್ ನ ದುಷ್ಟ ಶಕ್ತಿಗಳಿಂದ ಕೆಲ ಜೆಡಿಎಸ್ ಅಲ್ಪಸಂಖ್ಯಾತ ಮುಖಂಡರು ಕಾಂಗ್ರೆಸ್ ಗೆ ಸೇರ್ಪಡಯಾಗಿದ್ದರು.ಕಳೆದ 20 ವರ್ಷಗಳಿಂದ ನಮ್ಮ ಜೆಡಿಎಸ್ ಪಕ್ಷಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದರು.ಆದರೆ ಕಾಣದ ಕೈಗಳು ಇವರಿಗೆ ಇಲ್ಲ ಸಲ್ಲದ ಕಾರಣಗಳನ್ನು ನೀಡಿ ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಸಿದ್ದರು..ಕುಮಾರಸ್ವಾಮಿ ನೇತೃತ್ವದಲ್ಲಿ ಸಂದಾನ ನಡೆದಿದ್ದು ಇವರಿಗೆ ಪಕ್ಷದಲ್ಲಿ ಸೂಕ್ತವಾದ ಅವಕಾಶ ನೀಡುತ್ತೇವೆ ಎಂದು ಹೇಳಿದರು.
ತಾಲೂಕಿನಲ್ಲಿ ಜೆಡಿಎಸ್ ಪರವಾದ ಅಲೆಯಿದೆ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚುಜನ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ, ಕಳೆದ ಮೂರು ಚುನಾವಣೆಗಳಿಗಿಂತ ಹೆಚ್ಚಿನ ಪ್ರಭಾವ ಹೊಂದಿದೆ. ಅಭ್ಯರ್ಥಿಗೆ ನೀಡುವಷ್ಟೆ ಗೌರವವನ್ನು ಕಾರ್ಯಕರ್ತರಿಗೂ ನೀಡುತ್ತಿದ್ದೂ ಹೆಚ್ಚು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ ಎಂದರು.
ಕ್ಷೇತ್ರದಲ್ಲಿ ಶಾಸಕರಿಲ್ಲದಿದ್ದರೂ ಪಕ್ಷ ತನ್ನ ಅಸ್ತಿತ್ವ ಕಾಪಾಡಿಕೊಂಡಿದೆ ಈ ಬಾರಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿಯವರ ಕೈ ಬಲಪಡಿಸಲು, ಮುನೇಗೌಡರನ್ನು ಆಯ್ಕೆಮಾಡಿ ಕಳುಹಿಸುವುದು ನಿಶ್ವಿತ ಎಂದರು.
ಮುನೇಗೌಡ ಚುನಾವಣೆಗೊಮ್ಮೆ ಬಂದು ಹೋಗುತ್ತಾರೆ ಎಂಬ ಹೇಳಿಕೆ ಡಿಕೆ ಶಿವಕುಮಾರ್ ಅವರು ಯಾರೋ ಹೇಳಿಕೊಟ್ಟ ಬಾಷಣ ಮಾಡಿದ್ದಾರೆ ಮುನೇಗೌಡರು ಗ್ರಾಮೀಣ ಹಾಗೂ ನಗರ ಭಾಗದಲ್ಲಿ ದೇವಾಲಯಗಳಿಗೆ ಧಾನ ನೀಡಿದ್ದಾರೆ, ಜನರಿಗೆ ಕುಡಿಯುವ ನೀರು ವ್ಯವಸ್ಥೆ ಮಾಡಿದ್ದಾರೆ. ಆದರೆ, ಕೊರೋನ ಅವಧಿಯಲ್ಲಿ ಶಾಸಕರು ಮೂರು ತಿಂಗಳು ಮನೆಯಲ್ಲಿ ಸೇರಿಕೊಂಡಿದ್ದರು ಆದರೇ ಮುನೇಗೌಡರು 2 ಲಕ್ಷ ಜನಕ್ಕೆ ಊಟದ ವ್ಯವಸ್ಥೆ ಅಗತ್ಯ ವಸ್ತುಗಳನ್ನು ಒದಗಿಸಿದ್ದಾರೆ, ಅಧಿಕಾರ ಇಲ್ಲದಿದ್ದರು ತಾಲ್ಲೂಕಿನ ಜನರಿಗೆ ಸೇವೆ ಮಾಡಿದ್ದಾರೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.