ಬೆಂಗಳೂರು: ಕಳೆದ ಚುನಾವಣೆಯಲ್ಲಿ ಪ್ರತಿ ಗ್ರಾಮಗಳಿಗೆ ಭೇಟಿ ಕೊಟ್ಟಿದ್ದೆ. ಆದರೆ ಇಂದು ರಾಜ್ಯದ ಜವಾಬ್ದಾರಿ ಇರುವುದರಿಂದ ಕೇವಲ ಗ್ರಾಮ ಪಂಚಾಯತಿ ಇರುವ ಗ್ರಾಮಗಳಿಗೆ ಭೇಟಿ ಕೊಡುತ್ತಿದ್ದೇನೆ. ಯಾರು ಕೂಡ ಅನ್ಯಥಾ ಭಾವಿಸಬಾರದು ಎಂದು ಸಿಎಂ ಬಸವರಾಜ ಬೊಮ್ಮಾಯಿ(CM Bommai) ಮನವಿ ಮಾಡಿದರು. ಯಡಿಯೂರಪ್ಪ ನೆತೃತ್ವದಲ್ಲಿ ಕೊವೀಡ್ ಅನ್ನು ಉತ್ತಮವಾಗಿ ನಿರ್ವಹಿಸಿದ್ದೇವೆ.
ಔಷಧಿ ಹಾಗೂ ಲಸಿಕೆಯನ್ನು ವಿದೇಶದಿಂದ ತೆಗೆದುಕೊಳ್ಳುವುದನ್ನ ತಪ್ಪಿಸಿ ಭಾರತದಲ್ಲಿಯೇ ತಯಾರಿಸಿ ದೇಶದ ಜನರನ್ನು ರಕ್ಷಿಸಿದ್ದು ಬಿಜೆಪಿ ಸರ್ಕಾರ. ರಾಜ್ಯದ ಜನರನ್ನು ಕೋವಿಡ್ನಿಂದ ರಕ್ಷಿಸಿದ್ದು ಡಬಲ್ ಎಂಜಿನ್ ಸರ್ಕಾರದ ಸಾಧನೆ. ಯಡಿಯೂರಪ್ಪ ಅವರ ಪ್ರಯತ್ನದಿಂದ ಕೋವಿಡ್ ಮುಕ್ತ ರಾಜ್ಯ ಮಾಡಿದ್ದೇವೆ. ಕೋವಿಡ್ ಸಮಯದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಅನೇಕ ಜನರು ಸಾಯುತ್ತಿದ್ದರು ಎಂದರು.