ವಿಜಯನಗರ: ಪಕ್ಷೇತರ ಅಭ್ಯರ್ಥಿಯಾಗಿ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಡಾ.ಎಂ ಸುರೇಶ್ ಅವರು ಅಂಕಸಮುದ್ರ ಗ್ರಾಮದಲ್ಲಿ ಭರ್ಜರಿ ಪ್ರಚಾರ ಕಾರ್ಯ ಕೈಗೊಂಡರು,
ಡಾಕ್ಟರ್ ಸುರೇಶ್ ಅವರು ಹೋದ ಕಡೆಯಲೆಲ್ಲ ಜನವೋ ಜನ, ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳು ಮರಿಚಿಕೆಯಾಗಿದ್ದು ಕುಡಿಯುವ ನೀರು ಮೂಲಸೌಕರ್ಯವು ಕೂಡ ಇಲ್ಲದಂತಾಗಿದೆ ಎಂದು ಸ್ಥಳಿಯರು ಡಾ.ಸುರೇಶ್ ಅವರ ಬಳಿ ಹೇಳಿಕೊಳ್ಳತ್ತಿದ್ದ ದೃಶ್ಯ ಸರ್ವೇಸಾಮನ್ಯವಾಗಿತ್ತು.
ಈ ಭಾರಿ ಕ್ಷೇತ್ರದಲ್ಲಿ ಡಾ.ಸುರೇಶ್ ಅವರ ಆಟೋ ಗುರುತಿಗೆ ಮತ ಚಲಾಯಿಸುತ್ತವೆ ಎಂಬ ಮಾತುಗಳು ಎಲ್ಲೆಡೆ ವ್ಯಕ್ತವಾಗುತ್ತಿವೆ ಅಲ್ಲದೆ, ಬದಲಾವಣೆ ಜಗದ ಎಂಬ ಮಾತಿನಂತೆ ಪಕ್ಷೇತರ ಅಭ್ಯರ್ಥಿ ಪರ ಕ್ಷೇತ್ರದ ಮತದಾರರು ಒಲವು ಹೊಂದಿದ್ದಾರೆ ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗುತ್ತಿದೆ