ವೆಡ್ಡಿಂಗ್ ಡೇ ಎಂಬುದು ಎಲ್ಲರ ಪಾಲಿಗೆ ಜೀವನದಲ್ಲೇ ದಿ ಬಿಗ್ ಡೇ. ಹೀಗಾಗಿಯೇ ಈ ದಿನ ಯಾವಾಗ್ಲೂ ಮೆಮೊರೆಬಲ್ ಆಗಿರಬೇಕೆಂದು ಫೋಟೋ, ವೀಡಿಯೋ ಮಾಡಿಕೊಳ್ತಾರೆ. ಆದ್ರೆ ಇಲ್ಲೊಂದು ಮದ್ವೆ ಮನೆ ನೂತನ ವಧು–ವರರ ಜೊತೆ ಫೋಟೋ ತೆಗೆದುಕೊಳ್ಳುವ ವಿಚಾರಕ್ಕಾಗಿಯೇ ರಣಾಂಗಣವಾಗಿಬಿಟ್ಟಿದೆ. ಮದುವೆಗಳು (Marriage) ವಿಶೇಷವಾಗಿರುತ್ತವೆ ಮತ್ತು ಮದುವೆಯ ಚಿತ್ರಗಳು ಇನ್ನೂ ಹೆಚ್ಚು ವಿಶೇಷವಾಗಿರುತ್ತವೆ.
ಏಕೆಂದರೆ ಈ ಚಿತ್ರಗಳು ವಧು ಮತ್ತು ವರ ಮತ್ತು ಅವರ ಕುಟುಂಬದ ಸುಂದರ ಕ್ಷಣಗಳನ್ನು ಶಾಶ್ವತವಾಗಿ ಸೆರೆಹಿಡಿಯುತ್ತವೆ. ಆದರೆ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ಮದುವೆಯೊಂದರಲ್ಲಿ, ವಧು ಮತ್ತು ವರನ (Bride-groom) ಜೊತೆ ಚಿತ್ರಗಳನ್ನು ತೆಗೆದುಕೊಳ್ಳುವ ಬಗ್ಗೆ ಗಲಾಟೆಯೇ ನಡೆದು ಹೋಯ್ತು. ಯಾರು ಮೊದಲು ಫೋಟೋ ತೆಗೆದುಕೊಳ್ಳಬೇಕು ಅನ್ನೋ ವಿಚಾರವಾಗಿ ವಧು ಮತ್ತು ವರನ ಕುಟುಂಬ ಸದಸ್ಯರ ನಡುವೆ ಜಗಳ ನಡೆದು ಜನರು ದಿಕ್ಕಾಪಾಲಾದರು. ಸುಂದರವಾದ ದಿನವೊಂದು ಗಲಾಟೆಯಲ್ಲಿ (Fight) ಕೊನೆಗೊಂಡಿತು.