ಪಾಟ್ನಾ: ಬಿಹಾರದ ಮಹಿಳೆಯೊಬ್ಬಳು (Bihar Women) ಮತ್ತೊಬ್ಬನನ್ನ ಮದುವೆಯಾಗಲು ತನ್ನ ನಾಲ್ಕು ಮಕ್ಕಳನ್ನು ಬಿಟ್ಟು ಓಡಿಹೋಗಿರುವ ಘಟನೆ ಬಿಹಾರದ (Bihar) ಮುಜಾಫರ್ಪುರದಲ್ಲಿ ನಡೆದಿದೆ.
ಕತ್ರಾ ಪೊಲೀಸ್ ಠಾಣಾ (Katra Police Station) ವ್ಯಾಪ್ತಿಯಲ್ಲಿ ವಾಸವಿದ್ದ ಅಮೋದ್ ಮಹತೋ ತನ್ನ ಪತ್ನಿ ಕಾಣೆಯಾಗಿರುವುದಾಗಿ ದೂರು ದಾಖಲಿಸಿದ್ದನು. ಬ್ಯಾಂಕ್ಗೆ ಹೋಗುವುದಾಗಿ ಹೇಳಿ ಹೋಗಿದ್ದ ಪತ್ನಿ, ಸಂಜೆಯಾದರೂ ವಾಪಸ್ ಮನೆಗೆ ಹಿಂದಿರುಗದಿದ್ದಾಗ ಪತಿ ಕಿಡ್ನ್ಯಾಪ್ ಆಗಿರುವುದಾಗಿ ದೂರು ದಾಖಲಿಸಿದ್ದಾನೆ.
ಈ ಸಂಬಂಧ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಆಕೆ ಮತ್ತೊಬ್ಬನೊಂದಿಗೆ ಓಡಿಹೋಗಿರುವುದು ಕಂಡುಬಂದಿದೆ. ವ್ಯಕ್ತಿಯೊಬ್ಬ ಆಕೆಗೆ ಮದುವೆಯ ಆಮಿಷ ಒಡ್ಡಿ ಕರೆದೊಯ್ದಿದ್ದಾನೆ ಎಂದು ಹೇಳಲಾಗಿದೆ.
ಸಂತ್ರಸ್ತೆಗೆ ನಾಲ್ಕು ಮಕ್ಕಳಿದ್ದಾರೆ. ಪತಿ ಅಮೋದ್ ಕೂಲಿ ಕೆಲಸ ಮಾಡಿಕೊಂಡು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾನೆ. ಸದ್ಯ ಮಹಿಳೆಯನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.