ಲಂಡನ್: ಬ್ರಿಟನ್ ರಾಜನಾಗಿ ಮೂರನೇ ಚಾರ್ಲ್ಸ್ ಶನಿವಾರ ಪಟ್ಟಾಭಿಷಿಕ್ತರಾಗಲು ಸಿದ್ದವಾಗಿದ್ದಾರೆ. ಆದ್ರೆ ರಾಜಮನೆತನದ ಹೊನ್ನ ಕಳಸದಂತಿರುವ ರಾಣಿಯ ಕಿರೀಟದಲ್ಲಿ ಕೊಹಿನೂರ್ ವಜ್ರವಿರುವುದಿಲ್ಲ ಎನ್ನುವ ವಿಚಾರ ತಿಳಿದುಬಂದಿದೆ. ಅಂದರೆ ರಾಜನಾಗಿ ಪಟ್ಟಾಭಿಷೇಕ ಆಗಲಿರುವ ಚಾರ್ಲ್ಸ್ ಪತ್ನಿ ಕ್ಯಾಮಿಲಾ, ಕೊಹಿನೂರ್ ವಜ್ರವಿರುವ ಕಿರೀಟವನ್ನು ಧರಿಸುವುದಿಲ್ಲ ಎಂದು ಬಕಿಂಗ್ಹ್ಯಾಮ್ ಪ್ಯಾಲೇಸ್ ಸ್ಪಷ್ಟಪಡಿಸಿದೆ.
“ಕೊಹಿನೂರ್ ದಿ ಹಿಸ್ಟರಿ ಆಫ್ ವರ್ಲ್ಡ್ ಮೋಸ್ಟ್ ಫೇಮಸ್ ಡೈಮಂಡ್’ ಪುಸ್ತಕದ ಸಹಬರಹಗಾರ್ತಿ ಅನಿತಾ ಆನಂದ್ ಈ ಕುರಿತು ಪ್ರತಿಕ್ರಿಯಿಸಿದ್ದು, “ಕೊಹಿನೂರ್ ವಜ್ರದ ಇತಿಹಾಸವು ಬ್ರಿಟಿಷ್ ವಸಾಹತು ಶಾಹಿ ಚರಿತ್ರೆಯನ್ನು ನೆನಪಿಸುತ್ತದೆ. ಈ ಹಿನ್ನೆಲೆಯಲ್ಲಿ ಕೊಹಿನೂರ್ ಅನುಪಸ್ಥಿತಿ ಘೋಷಿಸಿರಬಹುದು’ ಎಂದಿದ್ದಾರೆ.