ದೊಡ್ಡಬಳ್ಳಾಪುರ: ತಾಲೂಕಿನ ಕಂಟನಕುಂಟೆಯ ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆಯ 2023 ಸಾಲಿನ SSLC ಪರೀಕ್ಷೆಯಲ್ಲಿ ಶೇ 100 ರಷ್ಟು ಫಲಿತಾಂಶ ಪಡೆದು ಸಾಧನೆ ಮಾಡಿದೆ.. ಶಾಲೆಯಲ್ಲಿ 81 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 31 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದು,50 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ..
ಶಾಲೆಗೆ ಪ್ರಥಮ ಸ್ಥಾನ ಪಡೆದ ಮೇಘನ ( 608- 97.28%) , ಸುದೀಪ್ತಿ ದ್ವಿತೀಯ (607 -97.12%), ಕಾಂಚನ ಹೆಚ್ ಕೆ ತೃತೀಯ(594-95.4%),ಯಶಸ್ವಿನಿ. ಎ ನಾಲ್ಕನೇ ಸ್ಥಾನ (590-94.40%) ಪಡೆದ ಈ ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲಿ 125-125 ಅಂಕಗಳು ಪಡೆದಿದ್ದು,ಹಿಂದಿ ಭಾಷೆಯಲ್ಲಿ ಮೂರು ವಿದ್ಯಾರ್ಥಿಗಳು 100-100 ಅಂಕ ಪಡೆದು, ಸಮಾಜದಲ್ಲಿ ಓರ್ವ ವಿದ್ಯಾರ್ಥಿ 100 – 100 ಅಂಕ ಪಡೆದಿದ್ದಾರೆ..
ಸಾಧನೆಗೈದ ವಿದ್ಯಾರ್ಥಿಗಳನ್ನು ಮತ್ತು ಬೋದನೆ ಮಾಡಿದ ಶಿಕ್ಷಕರಿಗೆ ಲಿಟ್ಲ್ ಮಾಸ್ಟರ್ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಕೆ.ಜಿ ಮೂರ್ತಿ, ಶಾಲೆಯ ಅಧ್ಯಕ್ಷೆ ಉಷಾ ಶ್ರೀನಿವಾಸಮೂರ್ತಿ, ಮುಖ್ಯೋಪಾಧ್ಯಾಯಿನ ಕಾವ್ಯ ಅಭಿನಂದಿಸಿದ್ದಾರೆ…