ಕರಾಚಿ: ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಪಾಕ್ ನಲ್ಲಿ ಬಂಧಿತರಾಗಿರುವ 199 ಭಾರತೀಯ ಮೀನುಗಾರರನ್ನು ಪಾಕಿಸ್ತಾನದ ಅಧಿಕಾರಿಗಳು ಮೇ 12 ರಂದು ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಶುಕ್ರವಾರ 199 ಮೀನುಗಾರರ ಬಿಡುಗಡೆ ಮತ್ತು ವಾಪಸಾತಿಗೆ ತಯಾರಿ ನಡೆಸುವಂತೆ ಸಂಬಂಧಿತ ಸರ್ಕಾರಿ ಸಚಿವಾಲಯಗಳಿಂದ ತಿಳಿಸಲಾಗಿದೆ ಎಂದು ಸಿಂಧ್ನ ಜೈಲು ಮತ್ತು ತಿದ್ದುಪಡಿ ವಿಭಾಗದ ಉನ್ನತ ಪೊಲೀಸ್ ಅಧಿಕಾರಿ ಕಾಜಿ ನಜೀರ್ ಹೇಳಿದ್ದಾರೆ.
ಸದ್ಯ ಬಿಡುಗಡೆಗೆ ರೆಡಿಯಾಗಿರುವ 199 ಮೀನುಗಾರರನ್ನು ಇಲ್ಲಿನ ಲಾಂಧಿ ಜೈಲಿನಲ್ಲಿ ಇರಿಸಲಾಗಿದೆ. ಇವರನ್ನು ಲಾಹೋರ್ಗೆ ಕಳುಹಿಸಿ ಬಳಿಕ ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿದು ಬಂದಿದೆ.
ಮೀನುಗಾರರೊಂದಿಗೆ ವಾಪಸಾಗಬೇಕಿದ್ದ ಭಾರತೀಯ ನಾಗರಿಕ ಖೈದಿ ಜುಲ್ಫಿಕರ್ ಅನಾರೋಗ್ಯದ ಕಾರಣ ಶನಿವಾರ ಕರಾಚಿಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರೂ ಸಹ ಸದ್ಭಾವನಾ ಸೂಚಕ ಪ್ರಕ್ರಿಯೆಯು ಇದರಲ್ಲಿ ಕಾಣಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.