ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್(DK Shivakumar) ಅವರು ಇಂದು ಹನುಮನ ದೇವಾಲಯಕ್ಕೆ ಭೇಟಿ ನೀಡಿದ್ದು, ಬಜರಂಗಬಲಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೆ.ಆರ್.ಮಾರುಕಟ್ಟೆಯಲ್ಲಿರುವ ಆಂಜನೇಯ ದೇವಾಸ್ಥಾನಕ್ಕೆ ಭೇಟಿ ನೀಡಿರುವ ಡಿಕೆ.ಶಿವಕುಮಾರ್ ಅವರು, ಪೂಜೆ ಸಲ್ಲಿಸಿದರು. ಬಜರಂಗದಳ ನಿಷೇಧ(BajrangDal ban) ಮಾಡುವ ಭರವಸೆ ವಿಚಾರ ತಾರಕಕ್ಕೇರಿದ್ದು, ಈ ಬೆನ್ನಲ್ಲೇ ಆಂಜನೇಯನ ದರ್ಶನವನ್ನು(Darshan of Anjaneya) ಡಿಕೆಶಿ ಪಡೆದಿದ್ದಾರೆ.
ಇನ್ನೂ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಪೌರ ಕಾರ್ಮಿಕರನ್ನು ಡಿಕೆ ಶಿವಕುಮಾರ್(DK Shivakumar) ಭೇಟಿ ಮಾಡಿದ್ದು, ಕೆಲಸ ಖಾಯಂ ಗೊಳಿಸುವಂತೆ ಡಿಕೆಶಿ ಬಳಿ ಪೌರ ಕಾರ್ಮಿಕರು ಮನವಿ ಮಾಡಿದ್ದಾರೆ. ಈ ವೇಳೆ ಪೌರ ಕಾರ್ಮಿಕರ ಕೈ ಹಿಡಿದು ಡಿಕೆಶಿ ಆಶ್ವಾಸನೆ ನೀಡಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಿಮ್ಗೆ ಖಾಯಂ ಗೊಳಿಸುತೇನೆ ಎಂದು ಪೌರಕಾರ್ಮಿಕರಿಗೆ ಆಶ್ವಾಸನೆ ಡಿಕೆಶಿ ಆಶ್ವಾಸನೆ ನೀಡಿದ್ದಾರೆ. ಇನ್ನೂ ಆಂಜನೇಯ ಸಮಾಜದ ಸೇವಕ. ಆಂಜನೇಯನ ಅನುಗ್ರಹ ನಮ್ಮ ಮೇಲೆ ಯಾವಾಗ್ಲೂ ಕೂಡ ಇರುತ್ತೆ.
ಇಲ್ಲಿಂದ ಮೈಸೂರಿನವರೆಗೂ ಕೂಡ ಸುಮಾರು 25 ಆಂಜನೇಯ ದೇವಸ್ಥಾನಗಳಿವೆ. ಆಂಜನೇಯ ಹೇಗೆ ಸೇವೆ ಮಾಡಿದ್ದಾನೋ ಆ ರೀತಿ ಸಮಾಜ ಸೇವೆ ಮಾಡುವ ಶಕ್ತಿ ಆಂಜನೇಯ ನೀಡಲಿ ಅಂತ ಕೇಳಿಕೊಂಡಿದ್ದೇನೆ. ನಮ್ಮ ನಾಡಿನ ದೇವತೆ ನಾಡಿನ ಜನತೆಯನ್ನು ಸುಭಿಕ್ಷವಾಗಿ ಇಡಲಿ ಅಂತ ಹೋಗ್ತಿದ್ದೇವೆ. ನಾಡಿನ ದೇವತೆ ಚಾಮುಂಡೇಶ್ವರಿ ಪ್ರಾರ್ಥನೆ ಮಾಡಬೇಕಾದದ್ದು ನಮ್ಮ ಕರ್ತವ್ಯ. ಇದು ನಮ್ಮ ಸಂಸ್ಕೃತಿ ಆಚಾರ ವಿಚಾರ. ನಾವು ಯಾವುದೇ ಕೆಲಸ ಮಾಡಲು ಹೋಗುವ ಮುಂಚೆ ಚಾಮುಂಡಿಗೆ ಪ್ರಾರ್ಥನೆ ಮಾಡಿ ಹೋಗುತ್ತೇವೆ. ಹೀಗಾಗಿ ನಾನು ಸಿದ್ದರಾಮಯ್ಯ ಇಬ್ಬರು ಹೋಗಿ ತಾಯಿ ಚಾಮುಂಡಿಗೆ ಆಶೀರ್ವಾದ ಪಡೆಯಬೇಕೆಂದು ಹೊರಟಿದ್ದೇವೆ ಎಂದು ಇದೇ ವೇಳೆ ಡಿಕೆಶಿ ಹೇಳಿದರು.