ಬೆಂಗಳೂರು: 2023 ರ ವಿಧಾನಸಭಾ ಚುನಾವಣೆಗೆ(Karnataka Assembly Election) ಕೌಂಟ್ ಡೌನ್ ಶುರುವಾಗಿದ್ದು, ಹೀಗಾಗಿ ಪಟ್ಟಣಗಳಲ್ಲಿ ವಾಸಿಸಿರುವ ಜನರು ತಮ್ಮ ಹಕ್ಕು ಚಲಾಯಿಸಲು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಖಾಸಗಿ ಬಸ್ ಮಾಲೀಕರು, ಟಿಕೆಟ್ ದರವನ್ನು ಹೆಚ್ಚಳ ಮಾಡಿದ್ದಾರೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಬಸ್ ದರ 800 ರೂ. ಇತ್ತು,
ಈಗ 1800ಕ್ಕೆ ಏರಿಕೆಯಾಗಿದೆ. ಅದೇ ರೀತಿ 950ರೂ. ಇದ್ದ ಮಂಗಳೂರು ಟಿಕೆಟ್ ದರ ಇದೀಗ 2200ರೂ. ಆಗಿದೆ. ಶಿವಮೊಗ್ಗ 900ರಿಂದ 2160 ರೂ., ಉಡುಪಿ 900 ರಿಂದ 2200 ರೂ., ಬೆಳಗಾವಿ 1100 ರಿಂದ 2800 ರೂ., ಹಾಸನ 650 ರಿಂದ 2200 ರೂ., ಗೋವಾ 1100 ರಿಂದ 3500 ರೂ., ಚಿಕ್ಕಮಗಳೂರು 700 ರಿಂದ 1500 ರೂ., ಕಲಬುರಗಿ 1400 ರಿಂದ 2500 ರೂ. ಬಾಗಲಕೋಟೆ 1400 ರಿಂದ 2300 ರೂ., ಯಾದಗಿರಿ 1400 ರಿಂದ 1999 ರೂ., ಅಥಣಿ 1400 ರಿಂದ 2200 ರೂ., ಕೊಡಗು 700 ರಿಂದ 1400 ರೂ., ಬಳ್ಳಾರಿ 900 ರಿಂದ 2500 ರೂ.ಗೆ ಏರಿಸಲಾಗಿದೆ.