ಬೆಂಗಳೂರು: ರಾಜ್ಯದಾದ್ಯಂತ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಆರಂಭಗೊಂಡಿದೆ. ಸಿದ್ದಲಿಂಗ ಸ್ವಾಮೀಜಿ, ನಟ ಪ್ರಕಾಶ್ ರಾಜ್ , ಹಾಸನದಲ್ಲಿ ಅಭ್ಯರ್ಥಿ ಪ್ರೀತಂ ಗೌಡ, ಸಚಿವ ಅಶ್ವಥ್ ನಾರಾಯಣ್ ಈಗಾಗಲೇ ಮತ ಚಲಾವಣೆ ಮಾಡಿದ್ದಾರೆ.
ಇನ್ನು ಮತಗಟ್ಟೆ ಸಂಖ್ಯೆ 23, ಮೈಸೂರಿನ ಚಾಮುಂಡಿಪುರಂನಲ್ಲಿ 96 ವರ್ಷದ ಅಜ್ಜಿ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ಇನ್ನು ವಚನಾನಂದ ಸ್ವಾಮೀಜಿ ಬೆಂಗಳೂರಿನ ಭೂಪಸಂದ್ರದಲ್ಲಿ ಮತ ಚಲಾವಣೆ ಮಾಡಿದ್ದಾರೆ.
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಸರ್ಕಾರಿ ಕನ್ನಡ – ಆಂಗ್ಲ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮತದಾನ ಆರಂಭಗೊಂಡಿದೆ. ಮತದಾನಕ್ಕೆ ಸರದಿಯ ಸಾಲಲ್ಲಿ ಬಂದು ಮತದಾರರು ನಿಂತಿದ್ದಾರೆ. ಮೊಮ್ಮಗನ ಜೊತೆ ಬಂದು ಅಜ್ಜಿ, ಮೀನಾ ಬಾಯಿ 76 ವರ್ಷದವರು ಮತಚಲಾಯಿಸಿದರು.
ಜನಪ್ರತಿನಿಧಿಗಳಿಂದ ಮತಚಲಾವಣೆ
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಶಿವಮೊಗ್ಗದ ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ವಿಜಯೇಂದ್ರ, ಸಚಿವರಾದ ಆರಗ ಜ್ಞಾನೇಂದ್ರ, ಸುಧಾಕರ್, ಮತಚಲಾವಣೆ ಮಾಡಿದ್ದಾರೆ.
ಮತಚಲಾಯಿಸಿದ ರಾಜಮಾತೆ ಪ್ರಮೋದಾದೇವಿ
ಬೆಳಗ್ಗೆಯೇ ಬಂದು, ಸರತಿ ಸಾಲಲ್ಲಿ ನಿಂತು ಮೈಸೂರಿನ ರಾಜಮಾತೆ ಪ್ರಮೋದಾದೇವಿ ಒಡೆಯರ್ ಮತದಾನಕ್ಕೆನಕಾಯುತ್ತಿದ್ದಾರೆ. ಮತಗಟ್ಟೆಯಲ್ಲಿದ್ದ ಸಾರ್ವಜನಿಕರು ಖುಷಿಯಿಂದ ನಮಸ್ಕರಿಸಿದರು. ಪ್ರಮೋದಾದೇವಿ ಎಲ್ಲರಿಗೂ ಪ್ರತಿವಂದನೆ ಮಾಡಿದರು.
ಮತಚಲಾಯಿಸಿದ ತುಂಬು ಗರ್ಭಿಣಿ
ಇಂದು 9 ಗಂಟೆಗೆ ಹೆರಿಗೆಯ ಸಮಯವನ್ನು ವೈದ್ಯರು ಕೊಟ್ಟಿದ್ದರೂ, ಅದಕ್ಕಿಂತ ಮೊದಲೇ ಮತಚಲಾವಣೆ ಮಾಡಬೇಕೆಂದು ತುಂಬು ಗರ್ಭಿಣಿಯೊಬ್ಬರು ಇನ್ನು ಯಶವಂತಪುರದಲ್ಲಿ 7 ಗಂಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರು.
ಕೊಪ್ಪಳ ಜಿಲ್ಲೆಯಲ್ಲಿ ಮತಯಂತ್ರ ದೋಷ
ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಮತಯಂತ್ರದಲ್ಲಿ ದೋಷ ಕಂಡುಬಂದಿದ್ದು, ಮತದಾನ ವಿಳಂಬವಾಗಿದೆ. ಯಂತ್ರ ಬದಲಾವಣೆ ಮಾಡಲು
ಸಿಬ್ಬಂದಿಗಳು ಪ್ರಯತ್ನಿಸುತ್ತಿದ್ದಾರೆ.
ಬೆಳಗಾವಿ ಚನ್ನಮ್ಮನ ಕಿತ್ತೂರು ಮತಕ್ಷೇತ್ರದ ಕಾದ್ರೊಳ್ಳಿ ಗ್ರಾಮದ ಮತಗಟ್ಟೆ ನಂ.139 ರಲ್ಲಿನ ವಿದ್ಯುನ್ಮಾನ ಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಮತದಾನ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಮತದಾನಕ್ಕಾಗಿ ಮತದಾರರು ಕಾಯುತ್ತಿದ್ದಾರೆ.
ರಾಮನಗರದಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದ್ದು ಮತಗಟ್ಟೆ ಬಳಿ ಉತ್ಸಾಹದಿಂದ ಬಂದು ಮತದಾನ ಮಾಡುತ್ತಿದ್ದಾರೆ.
ಮತಗಟ್ಟೆ ಸಂಖ್ಯೆ 92ರಲ್ಲಿ ಸರತಿ ಸಾಲಿನಲ್ಲಿ ನಿಂತು ಮತಚಲಾವಣೆ ಮಾಡುತ್ತಿದ್ದಾರೆ. ಮತಗಟ್ಟೆ ಸುತ್ತ ನಿಷೇಧಾಜ್ಞೆ ಜಾರಿ, ಭಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ರಾಯಚೂರು ಮತಯಂತ್ರದಲ್ಲಿ ತಾಂತ್ರಿಕ ದೋಷ
ರಾಯಚೂರು ನಗರದ ಪಿಂಕ್ ಸಖಿ ಮತಗಟ್ಟೆಯಲ್ಲಿ ಮತದಾನ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ.
ಅಣಕು ಮತದಾನ ಪೂರ್ಣಗೊಳ್ಳದ ಹಿನ್ನೆಲೆ, ಕೆಲ ಕಾಲ ಸಿಬ್ಬಂದಿ ಪರದಾಡಿದರು. ಮತಗಟ್ಟೆ 211 ರಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನಲೆ
ಅರ್ಧ ಗಂಟೆಯಿಂದ ಮತದಾನ ಸ್ಥಗಿತಗೊಂಡಿದೆ. ಸ್ಥಳಕ್ಕೆ ಅಧಿಕಾರಿಗಳ ದೌಡಾಯಿಸಿದ್ದಾರೆ. ಮತದಾರರು ಸಾಲು ಗಟ್ಟಿ ನಿಂತು ಕಾಯುತ್ತಿದ್ದಾರೆ.
ಬೆಂಗಳೂರಿನ ಮಹದೇವಪುರದ, ಅಯಪ್ಪನಗರದಲ್ಲಿ ಇವಿಎಂ ದೋಷ ಕಂಡುಬಂದಿದ್ದು, ಮತದಾರರು ಕಾದು ಕಾದು ಬೇಸತ್ತಿದ್ದಾರೆ.