ಬೆಂಗಳೂರಿನ (Bangalore) ಜೆಪಿ ನಗರದ ಮತದಾನ (Voting) ಕೇಂದ್ರಕ್ಕೆ ನಾನು ಮತ್ತು ನನ್ನ ತಂದೆ ಬಂದಾಗ ನಮ್ಮ ಕುಟುಂಬ ಬಿಟ್ಟು ಬೇರೆ ಯಾರೂ ಇರಲಿಲ್ಲ. ನಿಜಕ್ಕೂ ನನಗೆ ಶಾಕ್ ಆಯಿತು. ಮತದಾನ ಮಾಡುವಂತೆ ಏನೆಲ್ಲ ಮನವಿ ಮಾಡಿಕೊಂಡಿದ್ದಾರೆ. ಚುನಾವಣೆ ಆಯೋಗ ಸಾಕಷ್ಟು ಶ್ರಮ ಪಟ್ಟಿದೆ. ಆದರೆ, ಯುವಜನರಿಂದ ಮತದಾನಕ್ಕೆ ನೀರಸ ಪ್ರತಿಕ್ರಿಯೆ ಸಿಕ್ಕಿರುವುದು ನನಗಂತೂ ತುಂಬಾ ಬೇಸರವಾಗಿದೆ ಎಂದು ನಟಿ ಮೇಘನಾ ರಾಜ್ ಸರ್ಜಾ (Meghna Raj) ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಯುವಜನರ ನೀರಸ ಪ್ರತಿಕ್ರಿಯೆ ಬೇಸರ ತಂದಿದೆ. ಅಲ್ಲದೇ, ಸೋಷಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಮಾಮಾಡ್ತಾರೆ. ಬೆಂಗಳೂರಿಗೆ ಸಮಸ್ಯೆಯಾದಾಗ ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಆಗುತ್ತೆ. ಆದರೆ, ರಿಯಾಲಿಟಿಯಲ್ಲಿ ಮತದಾನ ಮಾಡೋಕೆ ಮಾತ್ರ ಹಿಂದೇಟು ಯಾಕೆ?’ ಎಂದು ಅವರು ಪ್ರಶ್ನೆ ಮಾಡಿದರು.
ಹುರುಪಿನಿಂದಲೇ ನಾನು ಮತ್ತು ನನ್ನ ಕುಟುಂಬ ಮತದಾನ ಮಾಡುವುದಕ್ಕೆ ಬಂದೆವು. ಬೂತ್ ಗೆ ಬಂದಾಗ ನಮ್ಮ ಕುಟುಂಬ ಬಿಟ್ಟು ಬೇರೆ ಯಾರು ಇರಲಿಲ್ಲ. ಮತದಾನ ನಡೆಯುತ್ತಿದೆಯಾ ಅಥವಾ ಇಲ್ಲವಾ ಎಂದು ನಮಗೆ ಗೊಂದಲವಾಗುವಂತೆ ಜನರು ಇದ್ದರು. ಹೀಗೆ ಆಗಬಾರದು. ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಬೇಕು ಎಂದು ಮೇಘನಾ ಹಾಗೂ ತಂದೆ ಸುಂದರ್ ರಾಜ್ ಬೇಸರ ವ್ಯಕ್ತಪಡಿಸಿದರು.