ತುಮಕೂರು: ಅಪಘಾತದಲ್ಲಿ (Accident) ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಆಂಬುಲೆನ್ಸ್ನಲ್ಲಿ (Ambulence) ಬಂದು ಮತದಾನ (Voting) ಮಾಡಿದ ಘಟನೆ ತುಮಕೂರು (Tumakuru) ಜಿಲ್ಲೆಯಲ್ಲಿ ನಡೆದಿದೆ.
ಸಂಪಗಿರಾಮು ಮತ ಚಲಾಯಿಸಿದ ವ್ಯಕ್ತಿ. ಇವರಿಗೆ ಅಫಘಾತವಾಗಿ ಗಂಭೀರ ಗಾಯವಾಗಿದ್ದರ ಪರಿಣಾಮ ನಾಲ್ಕು ತಿಂಗಳಿನಿಂದ ಹಾಸಿಗೆಯಲ್ಲಿಯೇ ಮಲಗಿದ್ದರು. ಇದೀಗ ಪತ್ನಿ ಜೊತೆ ಆಂಬುಲೆನ್ಸ್ನಲ್ಲಿ ಬಂದು ತುಮಕೂರು ನಗರದ ರೈಲ್ವೇ ಸ್ಟೇಷನ್ ರಸ್ತೆಯ ಮತಗಟ್ಟೆ ಸಂಖ್ಯೆ 148ರಲ್ಲಿ ಮತದಾನ ಮಾಡಿದ್ದಾರೆ
ಚುನಾವಣಾ ಸಿಬ್ಬಂದಿಯ ಸಹಾಯದಿಂದ ಇವರು ತಮ್ಮ ಮತದಾನವನ್ನು ಮಾಡಿದ್ದಾರೆ. ಎಂತಹ ಸ್ಥಿತಿಯಲ್ಲಿದ್ದರೂ ಮತ ಚಲಾಯಿಸಬೇಕು ಎಂಬ ಇವರ ಮಾತು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ.