ಬೆಂಗಳೂರು: ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು ಕ್ರಮ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ ಚುನಾವಣಾ ಆಯೋಗದ ವಿರುದ್ಧ ಕೆಜಿಎಫ್ ಬಾಬು ಬೆಂಬಲಿಗರು ಆಕ್ರೋಶ ಹೊರ ಹಾಕಿದ್ದಾರೆ. ಕೆಜಿಎಫ್ ಬಾಬು ಕ್ರಮ ಸಂಖ್ಯೆ 12, ಆದರೆ ಚುನಾವಣೆ ಆಯೋಗ 13 ಅಂತಾ ತಪ್ಪಾಗಿ ದಾಖಲಿಸಿದೆ. ಈ ಹಿನ್ನೆಲೆ ಕೆಜಿಎಫ್ ಬೆಂಬಲಿಗರು ಆಕ್ರೋಶ ಹೊರ ಹಾಕಿದ್ದಾರೆ.
ಬೂತ್ ಹೊರಭಾಗದಲ್ಲಿ ಆಯೋಗದಿಂದ ಅಭ್ಯರ್ಥಿಗಳ ವಿವರ ಪಟ್ಟಿ ಪ್ರಕಟವಾಗಿದ್ದು, ಈ ಪಟ್ಟಿಯಲ್ಲಿ ಕ್ರಮ ಸಂಖ್ಯೆ12 ರ ಬದಲು 13 ಅಂತಾ ಚುನಾವಣೆ ಆಯೋಗ ಯಡವಟ್ಟು ಮಾಡಿದೆ. ಇದನ್ನು ನೋಡಿದ ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು ಬೆಂಬಲಿಗರು ಚುನಾವಣಾ ಆಯೋಗದ ಅಧಿಕಾರಿಗಳ ಬೇಜವಾಬ್ದಾರಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.