ಬಳ್ಳಾರಿ: ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Election) ಹಿನ್ನೆಲೆಯಲ್ಲಿ ಎರಡು ಕೈ ಇಲ್ಲದ ವಿಶೇಷ ಚೇತನನೊಬ್ಬರು ಬಳ್ಳಾರಿಯಲ್ಲಿ (Ballary) ಮತದಾನ ಚಲಾಯಿಸಿದರು.
ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕೊಳಗಲ್ಲು ಗ್ರಾಮದ ಮುಸ್ತಫಾ ಅವರಿಗೆ ಕೈಗಳೆರಡು ಇಲ್ಲ. ಆದರೂ ಅತ್ಯಂತ ಹುರುಪಿನಿಂದ ಮತಗಟ್ಟೆಗೆ ಬಂದ ಮುಸ್ತಫಾ ಅವರು ತಮ್ಮ ಹಕ್ಕನ್ನು ಚಲಾಯಿಸಿದರು. ಈ ಮೂಲಕ ಉಳಿದವರಿಗೂ ಮಾದರಿಯಾದರು. ಈ ವೇಳೆ ಚುನಾವಣಾ ಅಧಿಕಾರಿಗಳು ಮುಸ್ತಫಾಗೆ ಎರಡೂ ಕೈ ಇಲ್ಲದ ಕಾರಣ ಕಾಲು ಬೆರಳಿಗೆ ಮತದಾನದ ಶಾಹಿ ಹಾಕಿದರು. ವಿಶೇಷ ಚೇತನ ಎಂ.ಡಿ ಮುಸ್ತಫಾ ಅವರು ಮತದಾನ ಮಾಡಿದರು.
ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವೆಂದೇ ಪರಿಗಣಿಸಲ್ಪಟ್ಟಿರುವ ಕರ್ನಾಟಕ ಚುನಾವಣೆ ಇಂದು ಬೀರುಸಿನಿಂದ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದಲೇ ರಾಜ್ಯದ 224 ಮತ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.