ಬೆಂಗಳೂರು: ನನ್ನ ಹೆಸರಲ್ಲಿ ಬೇರೆ ಯಾರೋ ವೋಟ್ ಮಾಡಿದ್ದಾರೆಂದು ಯುವಕ ಆಕ್ರೋಶ ಹೊರ ಹಾಕಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಸಯ್ಯದ್ ಪಹಾದ್ ಪುಲಕೇಶಿ ವಿಧಾನಸಭಾ ಕ್ಷೇತ್ರದ ಮತದಾರನಾಗಿದ್ದು, ವೋಟ್ ತಪ್ಪಿರುವ ಹಿನ್ನೆಲೆ ಅಸಮಾಧಾನ ಹೊರ ಹಾಕಿದ್ದಾರೆ. ನಾನು ಮತದಾನ ಮಾಡಲು ಮತಕೇಂದ್ರಕ್ಕೆ ಬಂದಾಗ,
ನಿನ್ನ ಓಟ್ ಈಗಾಗಲೇ ಆಗಿದೆ ಎಂದು ಎಲೆಕ್ಷನ್ ಆಫೀಸರ್ ವಾಪಸ್ ಕಳಿಸಿದ್ದಾರೆ. ಇವರು ಯಾವ ರೀತಿ ಪರಿಶೀಲನೆ ಮಾಡ್ತಿದಾರೆ. ವೋಟರ್ ಐಡಿ, ವೋಟರ್ ಸ್ಲಿಪ್ ನನ್ನತ್ರ ಇದೇ. ನನ್ನ ಓಟ್ ನನಗೆ ಬೇಕು ಇದು ನನ್ನ ಹಕ್ಕು. ದಯವಿಟ್ಟು ನನಗೆ ಮತದಾನ ಮಾಡಲು ಅವಕಾಶ ಮಾಡಿ ಕೊಡಿ ಎಂದು ಯುವಕ ಆಕ್ರೋಶ ಹೊರ ಹಾಕಿದ್ದಾರೆ.