ಬೆಂಗಳೂರು: ಶುದ್ಧ ಕುಡಿಯುವ ನೀರಿನ ಘಟಕದ ಬಳಿ ಬರದಂತೆ ಪೊಲೀಸರಿಂದ ಜನರಿಗೆ ಅಡ್ಡಿ ಪಡಿಸಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. 2023 ರ ವಿಧಾನಸಭಾ ಚುನಾವಣೆ ಪ್ರಯುಕ್ತ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಅದರ ಭಾಗವಾಗಿ ಇಂದು ಪುಲಿಕೇಶಿ ನಗರದಲ್ಲಿ ಶುದ್ಧ ಕುಡಿಯುವ ನೀರು ತರಲು ಸ್ಥಳೀಯರು ಬಂದಾಗ ಪೊಲೀಸರು ಅಡ್ಡಿಪಡಿಸಿದ್ದಾರೆ. ಮತಗಟ್ಟೆ ಇದೆ ಯಾರೂ ಬರಬೇಡಿ ಎಂದು ಪೋಲೀಸರು ಹೇಳುತ್ತಿದ್ದು,
ಕುಡಿಯುವ ನೀರು ತಗೊಂಡ್ ಹೋಗಲು ಯಾಕೆ ಅಡ್ಡಿ ಪಡಿಸ್ತೀರಾ ಎಂದು ಜನರು ಗಲಾಟೆ ಮಾಡಿದ್ದಾರೆ. ಜನ ಸೇರುವಂತಿಲ್ಲ ಎಂದು ಪೋಲಿಸರು ಜನರಿಗೆ ತಿಳಿಹೇಳುವ ಪ್ರಯತ್ನ ನಡೆಸಿದರೂ ಸ್ಥಳೀಯರು ಪೊಲೀಸರ ನಡುವೆ ವಾಗ್ವಾದಕ್ಕೆ ಇಳಿದರು. ಕಡೆಗೆ ಗಾಡಿಗಳನ್ನು ದೂರ ನಿಲ್ಲಿಸಿ, ನೀರು ಹಿಡಿದುಕೊಂಡು ಹೋಗಲು ಪೊಲೀಸರು ವ್ಯವಸ್ಥೆ ಮಾಡಿಕೊಟ್ಟರು. ಅದರಂತೆ ಸ್ಥಳೀಯರು ನೀರು ತೆಗೆದುಕೊಂಡು ಹೋಗುವ ದೃಶ್ಯ ಸೆರೆಯಾಗಿದೆ.