ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ನಡೆದಿದ್ದು, ಈ ಬಾರಿ ದಾಖಲೆಯ 73 ಕ್ಕಿಂತ ಹೆಚ್ಚು ಮತದಾನವಾಗಿದೆ. ಕಳೆದ ಬಾರಿಗಿಂತಲೂ ಶೇಕಡಾವಾರು ಪ್ರಮಾಣದ ಮತದಾನ ಈ ಬಾರಿ ಹೆಚ್ಚಾಗಿದೆ.
ಆರಂಭದಲ್ಲಿ ಮತದಾರರು ಮತದಾನವನ್ನು ಮಾಡಲು ನಿರುತ್ಸಾಹ ಕಂಡು ಬಂದಿತ್ತು, ಆದರೆ ಸಮಯ ಕಳೆದಂತೆ ಮತದಾರರು ಮತದಾನ ಕೇಂದ್ರಗಳತ್ತ ಆಗಮಿಸಿ, ಮತದಾನವನ್ನು ಮಾಡಿ, ಪ್ರಜಾಪ್ರಭುತ್ವದ ಹಬ್ಬದ ಭಾಗವಹಿಸಿ ಸಂಭ್ರಮಿಸಿದರು.
ಇನ್ನೂ ನಿನ್ನೆ ನಡೆದ ಮತದಾನದ ವೇಳೆಯಲ್ಲಿ,ಅಲಲ್ಲಿ ಸಣ್ಣ ಪುಟ್ಟ ಗಲಾಟೆ, ಹಾಗೂ ಮತ ಯಂತ್ರಗಳ ದೋಶವನ್ನು ಹೊರತು ಪಡಿಸಿ ಬಹುತೇಕವಾಗಿ ಶಾಂತಿಯುತವಾಗಿ ಮತದಾನ ನೇರವೇರಿದೆ.
ವರುಣಾದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಶಿಗ್ಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ. ಶಿಕಾರಿ ಪುರದಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯ್ಯೂರಪ್ಪ ಹಾಗೂ ಕನಕಪುರದಲ್ಲಿ ಡಿ.ಕೆ ಶಿವಕುಮಾರ್ ಅವರು ಮತದಾನವನ್ನು ಮಾಡಿದರು. ಹೊಳೆನರಸೀಪುರ ಕ್ಷೇತ್ರದ ಪಡುವಲಹಿಪ್ಪೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪತ್ನಿ ಚನ್ನಮ್ಮ ಅವರೊಂದಿಗೆ ಆಗಮಿಸಿ ಮತಚಲಾಯಿಸಿದರು. ಇದಲ್ಲದೇ ಸ್ಯಾಂಡಲ್ವುಡ್ ನಟ ನಟಿಯರು ಕೂಡ ಮತದಾನದವನ್ನು ಮಾಡಿ ಎಲ್ಲರಿಗೂ ಮಾದರಿಯಾದ್ರು.
ಇನ್ನೂ ಜಿಲ್ಲಾವಾರು ಮತದಾನದ ವಿವರವನ್ನು ನೋಡುವುದಾದ್ರೆ ಅದರ ವಿವರ ಈ ಕೆಳಕಂಡತೆ ಇದೆ.
- ಬೆಂಗಳೂರು ಸೆಂಟ್ರಲ್ ಶೇ45
- ಬೆಂಗಳೂರು ನಾರ್ತ್ ಶೇ02
- ಬೆಂಗಳೂರು ಸೌತ್ ಶೇ15
- ಬಾಗಲಕೋಟೆ ಶೇ28
- ಬೆಂಗಳೂರು ಗ್ರಾಮೀಣ ಶೇ10
- ಬೆಂಗಳೂರು ನಗರ ಶೇ08
- ಬೆಳಗಾಂ ಶೇ83
- ಬಳ್ಳಾರಿ ಶೇ68
- ಬೀದರ್ ಶೇ66
- ಬಿಜಾಪುರ ಶೇ58
- ಚಾಮರಾಜನಗರ ಶೇ81
- ಚಿಕ್ಕಮಗಳೂರು06
- ಚಿಕ್ಕಬಳ್ಳಾಪುರ ಶೇ64
- ಚಿತ್ರದುರ್ಗ ಶೇ68
- ದ.ಕನ್ನಡ ಶೇ88
- ದಾವಣಗೆರೆ 71.30
- ಧಾರವಾಡ ಶೇ 65.13
- ಗದಗ ಶೇ 71.55
- ಗುಲರ್ಬಗ ಶೇ 60.92
- ಹಾಸನ ಶೇ 74.67
- ಹಾವೇರಿ ಶೇ 74.34
- ಕೊಡಗು ಶೇ 70.46
- ಕೋಲಾರ ಶೇ 76.90
- ಕೊಪ್ಪಳ ಶೇ73.25
- ಮಂಡ್ಯ ಶೇ 75.90
- ಮೈಸೂರು ಶೇ 68.32
- ರಾಯಚೂರು ಶೇ 64.16
- ರಾಮನಗರ ಶೇ 79.39
- ಶಿವಮೊಗ್ಗ ಶೇ 76.19
- ತುಮಕೂರು ಶೇ 77.75
- ಉಡುಪಿ ಶೇ 78.46
- ಉ.ಕನ್ನಡ ಶೇ 68.06
- ವಿಜಯನಗರ ಶೇ 77.62