ಹುಬ್ಬಳ್ಳಿ: ಮತದಾನೋತ್ತರ ಸಮೀಕ್ಷೆಗಳು ಕಳೆದ ಬಾರಿ ಕಾಂಗ್ರೆಸ್ 107ಕ್ಕೂ ಅಧಿಕ ಸ್ಥಾನ ಅಂತ ಹೇಳಿದ್ದವು ಆದರೆ ಫಲಿತಾಂಶದ ದಿನ ಅದು ಉಲ್ಟಾ ಆಯಿತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ನಗರದ ಆದರ್ಶನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು. ಚುನಾವಣಾ ಎಲ್ಲ ಬೆಳವಣಿಗೆಗೆ ಬಗ್ಗೆ ಈಗಲೂ ಅದೇ ನಂಬಿಕೆಯಿದ್ದು ಭಾರತೀಯ ಜನತಾ ಪಕ್ಷ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ಜನತೆ ತೋರಿದ ಪ್ರೀತಿಗೆ ನಾನು ಚಿರೃಣಿ ಎಂದ ಅವರು ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಿದರು ಇದು ಒಳ್ಳೆಯ ಬೆಳವಣೆಗೆ ಎಂದರು.
ನನ್ನ ವಿರುದ್ಧ ಷಡ್ಯಂತರ, ಅಪ್ರಚಾರ ಮಾಡಿದರು ಆದರೆ ನಿನ್ನೆಗೆ ಮುಗಿದಿವೆ ಇಂದು ಯಾವುದೇ ಆ ವಾತಾವರಣ ಇಲ್ಲ.ನಾನು ದೊಡ್ಡ ಬಹುಮತದಿಂದ ಗೆಲ್ಲುತ್ತೆನೆ ಯಾವುದೇ ಅನುಮಾನ ಬೇಡಾ ಎಂದರು. ಪ್ರಧಾನಿ ನರೇಂದ್ರ
ಮೋದಿಯವರ ಪ್ರಚಾರ ನಮ್ಮ ಪ್ಲಸ್ ಆಗಿದೆ ಎಂದ ಅವರು ಯುವಕರು ಮತ್ತು ಮಹಿಳೆಯರು ನಮ್ಮ ಪರವಾಗಿ ಮತದಾನ ಮಾಡಿದ್ದಾರೆ. ನನಗೆ ವಿಶ್ವಾಸವಿದೆ ನಾವು ಸಂಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೆವೆ ಎಂದ ಅವರು
ಒಂದು ವೇಳೆ ಅತಂತ್ರ ಎಂಬ ಪ್ರಶ್ನೆ ಉತ್ತರ ನೀಡಲ್ಲ ಇದು ಕೇವಲ ಊಹಾಪೋಹಗಳು ಇದಕ್ಕೆ ಉತ್ತರ ಕೊಡುವುದು ಸರಿಯಲ್ಲ ಎಂಬ ನಿರ್ಧಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ಇನ್ನು ನಾನು 150 ಅಂತ ಎಲ್ಲೂ ಹೇಳಿಲ್ಲ ಆದರೆ ಬಹುಮತ ಅಂತ ಹೇಳಿದ್ದೆ ಈಗಲೂ ಅದೇ ಹೇಳಿಕೆ ಬದ್ಧ ಎಂದರು.