ಬೆಂಗಳೂರು: 2023 ರ ವಿಧಾನಸಭಾ ಚುನಾವಣೆ ನಿನ್ನೆ ಯಶಸ್ವಿಯಾಗಿ ನಡೆದಿದೆ. ಇನ್ನೂ ಮತದಾನ ದಿನದಂದು ಶೇಕಡ 50ರಷ್ಟು ಮೆಟ್ರೋ ಪ್ರಯಾಣಿಕರ ಸಂಖ್ಯೆ ಕುಸಿತ ಕಂಡಿದೆ. ಮೆಟ್ರೋ ರೈಲುಗಳು ನಿನ್ನೆ ರಾತ್ರಿ 9.30 ರವರೆಗೆ ನೇರಳೆ ಮತ್ತು ಗ್ರೀನ್ ಮಾರ್ಗಗಳಲ್ಲಿ 3,03,845 ಜನರು ಪ್ರಯಾಣಿಸಿದ್ದಾರೆ. ಕೆಆರ್ ಪುರ- ವೈಟ್ಫೀಲ್ಡ್ ಮಾರ್ಗವು ಇದೇ ಅವಧಿಯಲ್ಲಿ 12,395 ಜನರು ಪ್ರಯಾಣ ಮಾಡಿದ್ದಾರೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತದಾನದ ದಿನದಂದು ಮಧ್ಯರಾತ್ರಿಯವರೆಗೂ ಮೆಟ್ರೋ ರೈಲುಗಳು ಸಂಚಾರ ಮಾಡಿದ್ದವು. ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲು ಮೇ 11 ರಂದು 12.05 ಕ್ಕೆ ಹೊರಟಿತು. ಮೆಜೆಸ್ಟಿಕ್ನಿಂದ ಕೊನೆಯ ಮೆಟ್ರೋ ರೈಲು ಮೇ 11 ರಂದು 12.35 ಕ್ಕೆ ಬೈಯಪ್ಪನಹಳ್ಳಿ, ನಾಗಸಂದ್ರ, ಸಿಲ್ಕ್ ಇನ್ಸ್ಟಿಟ್ಯೂಟ್ ಮತ್ತು ಕೆಂಗೇರಿ ಕಡೆಗೆ ಹೊರಟಿತ್ತು. ಸಾಮಾನ್ಯ ದಿನಗಳಲ್ಲಿ ಮೆಟ್ರೋ ರೈಲು ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ರೈಲು ರಾತ್ರಿ 11 ಗಂಟೆಗೆ ಹೊರಡುತ್ತದೆ. ಬಿಎಂಆರ್ಸಿಎಲ್ ವಿಸ್ತೃತ ಸಮಯವು ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸುತ್ತದೆ ಎಂದು ಭಾವಿಸುತ್ತದೆ.