ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಇದೀಗ ಮರಾಠಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅಜನೀಶ್ ಲೋಕನಾಥ್ ಗೆ ಸಾಕಷ್ಟು ಬೇಡಿಕೆ ಇದ್ದು ಈ ಮಧ್ಯೆ ಪರಭಾಷೆಗಳಿಂದ ಸಾಕಷ್ಟು ಬುಲಾವ್ ಬರುತ್ತಿದೆ. ತೆಲುಗು ಬಳಿಕ ಇದೀಗ ಮರಾಠಿ ಚಿತ್ರರಂಗದತ್ತ ಮುಖ ಮಾಡಿದ್ದಾರೆ.
ಅಜನೀಶ್ ಲೋಕನಾಥ್ ಕನ್ನಡದ ಜೊತೆಗೆ ಪರ ಭಾಷೆಯ ಸಿನಿಮಾಗಳನ್ನ ಒಪ್ಪಿಕೊಳ್ಳುತ್ತಿದ್ದಾರೆ. ಅಲ್ಲೂ ತಮ್ಮ ಸಂಗೀತ ಪ್ರತಿಭೆಯನ್ನ ಅದ್ಭುತ ಹಾಡುಗಳನ್ನ ನೀಡುವ ಮೂಲಕ ಅಲ್ಲಿಯ ಜನರ ಮನಸ್ಸು ಕದ್ದಿಯುತ್ತಿದ್ದಾರೆ. ‘ಕಾಂತಾರ’ ಮೂಲಕ ಎಲ್ಲೆಡೆ ಚಿರಪರಿಚಿತರಾಗಿರೋ ಅಜನೀಶ್ ಇದೀಗ ಮರಾಠಿ ಇಂಡಸ್ಟ್ರಿಗೂ ಎಂಟ್ರಿಕೊಟ್ಟಿದ್ದಾರೆ.
ಅಜನೀಶ್ ಓಕನಾಥ್ ‘ಸರಿ’ ಸಿನಿಮಾದ ಮೂಲಕ ಮರಾಠಿ ಇಂಡಸ್ಟ್ರಿಗೂ ಕಾಲಿಟ್ಟಿದ್ದಾರೆ. ಕನ್ನಡದ ‘ದಿಯಾʼ ಹೀರೋ ಪೃಥ್ವಿ ಅಂಬರ್ ನಟಿಸಿರುವ ಸಿನಿಮಾ ಇದಾಗಿದ್ದು, ‘ದಿಯಾ’ ಚಿತ್ರವನ್ನೇ ಮರಾಠಿ ‘ಸರಿ’ ಟೈಟಲ್ನಲ್ಲಿ ಸಿನಿಮಾ ಮಾಡಲಾಗಿದೆ.
ಅಜನೀಶ್ ಲೋಕನಾಥ್ ಈಗಾಗಲೇ ತೆಲುಗು ಮತ್ತು ತಮಿಳು ಸಿನಿಮಾಗಳಿಗೆ ಸಂಗೀತ ಕೊಟ್ಟಿದ್ದಾರೆ. ಇದೀಗ ಮರಾಠಿ ಇಂಡಸ್ಟ್ರೀಗೂ ಕಾಲಿಟ್ಟಿದ್ದಾರೆ. ಮೇ-5 ರಂದು ಮರಾಠಿ ಭಾಷೆಯ ಸರಿ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಬಂದಿದೆ.