ವಾಷಿಂಗ್ಟನ್: ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಷ್-ಎ-ಮೊಹಮ್ಮದ್ನ ಉಗ್ರ ಅಬ್ದುಲ್ ರವೂಫ್ ಅಝರ್ನನ್ನು ಕಪ್ಪು ಪಟ್ಟಿಗೆ ಸೇರಿಸುವ ಭಾರತ ಪ್ರಸ್ತಾಪವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾ ವಿರೋಧಿಸಿದೆ.
ಜೈಷ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ನ ಸಹೋದರನಾಗಿರುವ ರವೂಫ್, 1999ರ ಇಂಡಿಯನ್ ಏರ್ಲೈನ್ಸ್ ವಿಮಾನ ಅಪಹರಣ ಪ್ರಕರಣ, 2001ರ ಸಂಸತ್ ದಾಳಿ ಹಾಗೂ 2016ರ ಪಠಾಣ್ಕೋಟ್ ದಾಳಿಯಲ್ಲಿ ಕೈವಾಡ ಇತ್ತು. ಬಳಿಕ 2010ರಲ್ಲಿ ರವೂಫ್ ಅಝರ್ ನನ್ನು ಅಮೆರಿಕ ನಿರ್ಬಂಧ ಹೇರಿತ್ತು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವಾಗಿರುವ ಚೀನಾ, ಕಳೆದ ವರ್ಷ ಆಗಸ್ಟ್ನಲ್ಲಿ ತನ್ನ ವಿಟೋ ಅಧಿಕಾರವನ್ನು ಉಪಯೋಗಿಸಿ, ರವೂಫ್ ಅಝರ್ನನ್ನು ಜಾಗತಿಕ ಉಗ್ರ ಎಂದು ಘೋಷಿಸಿ, ಆತನ ಆಸ್ತಿಯನ್ನು ಮುಟ್ಟುಗೋಲು ಹಾಕುವ ಭಾರತದ ಪ್ರಸ್ತಾಪವನ್ನು ಚೀನಾ ವಿರೋಧಿಸಿದೆ.