ಮದುವೆ ಹಾಗೂ ಲವ್ ವಿಷಯಕ್ಕೆ ಕಳೆದ ಕೆಲ ತಿಂಗಳಿನಿಂದ ಸಖತ್ ಸದ್ದು ಮಾಡುತ್ತಿದ್ದ ಟಾಲಿವುಡ್ ನಟ ನರೇಶ್ ಹಾಗೂ ಸ್ಯಾಂಡಲ್ ವುಡ್ ನಟಿ ಪವಿತ್ರಾ ಲೋಕೇಶ್ ಇತ್ತೀಚೆಗೆ ಮತ್ತೆ ಮದುವೆ ಸಿನಿಮಾದ ಕುರಿತು ಸುದ್ದಿಯಾಗ್ತಿದ್ದಾರೆ. ತಮ್ಮ ಲವ್ ಸ್ಟೋರಿಯನ್ನು ಹೇಳುವುದಕ್ಕಾಗಿಯೇ ನರೇಶ್ ಸಿನಿಮಾ ಮಾಡಿದ್ದು, ಮಾಜಿ ಪತ್ನಿ ಮೇಲೆ ಸೇಡು ತೀರಿಸಿಕೊಳ್ಳಲು 15 ಕೋಟಿ ಖರ್ಚು ಮಾಡಿದ್ದಾರೆ ಎನ್ನಲಾಗುತ್ತಿದೆ.
ಮತ್ತೆ ಮದುವೆ ಸಿನಿಮಾಗೆ ನರೇಶ್ 15 ಕೋಟಿ ಬಂಡವಾಳ ಹೂಡಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ತಾವೇಕೆ ಪವಿತ್ರಾ ಲೋಕೇಶ್ ಹಿಂದೆ ಬಿದ್ದೆ ಎನ್ನುವ ಕುರಿತು ಕಥೆಯನ್ನು ನರೇಶ್ ಹೇಳಿದ್ದಾರಂತೆ.
ನಿನ್ನೆಯಷ್ಟೇ ಮತ್ತೆ ಮದುವೆ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ತಮ್ಮ ರಿಯಲ್ ಲೈಫ್ ಘಟನೆಯನ್ನು ಈ ಜೋಡಿ ಸಿನಿಮಾ ಮಾಡಿರುವುದು ಟ್ರೈಲರ್ ನಲ್ಲಿ ಗೊತ್ತಾಗುತ್ತಿದೆ. ಈ ಹಿಂದೆ ರಿಲೀಸ್ ಆಗಿದ್ದ ಟೀಸರ್ ಬಹಳ ಸದ್ದು ಮಾಡಿತ್ತು. ಅದರ ಬೆನ್ನಲ್ಲೇ ಈಗ ಬಿಡುಗಡೆಯಾಗಿರುವ ಮತ್ತೆ ಮದುವೆ ಟ್ರೈಲರ್ ಸಾಕಷ್ಟು ಕುತೂಹಲ ಮೂಡಿಸಿದೆ.
ಪವಿತ್ರಾ ಲೋಕೇಶ್ ಹಾಗೂ ನರೇಶ್ ನಡುವೆ ಪ್ರೀತಿ ಹುಟ್ಟಿದ್ದೇಗೆ? ಆ ಪ್ರೀತಿಗೆ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿಯೇ ವಿಲನ್ ಆಗಿ ನಿಂತಿರುವುದು. ಈ ಮೂವರ ಜಗಳ ಹಾದಿ ಬೀದಿ ರಂಪವಾಗಿದ್ದು. ಮೈಸೂರು ಹೋಟೆಲ್ ನಲ್ಲಿ ನಡೆದ ಹೈಡ್ರಾಮಾ ಕಹಾನಿ. ಈ ವಯಸ್ಸಿನಲ್ಲಿ ನರೇಶ್ ಮತ್ತೆ ಪ್ರೀತಿಯಲ್ಲಿ ಬೀಳೋದು. ಜನ ಹೀಯಾಳಿಸೋದು. ಹೀಗೆ ನಾನಾ ವಿಷಯಗಳನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ.
ನರೇಶ್ ಲೈಫ್ ಸ್ಟೋರಿಯಲ್ಲಿ ಮೂರನೇ ಪತ್ನಿ ರಮ್ಯಾ ಅವರೇ ವಿಲನ್ ಆಗಿ ಕಾಣಿಸಿಕೊಂಡಿದ್ದರೆ, ಪವಿತ್ರಾ ಲೋಕೇಶ್ ಹಿನ್ನೆಲೆಯ ಕಥೆಯಲ್ಲಿ ವಿಲನ್ ಆಗಿ ನಿಂತವರು ಪತಿ ಸುಚೇಂದ್ರ ಪ್ರಸಾದ್ ಎನ್ನುವಂತೆ ಟ್ರೈಲರ್ ನಲ್ಲಿ ತೋರಿಸಲಾಗಿದೆ. ಹಾಗಾಗಿ ಈ ಸಿನಿಮಾಗೆ ರಮ್ಯಾ ಮತ್ತು ಸುಚೇಂದ್ರ ಪ್ರಸಾದ್ ಹಿನ್ನೆಲೆಯ ಪಾತ್ರಗಳೇ ಖಳನಾಯಕರಾ? ಟ್ರೈಲರ್ ನೋಡಿದ ಮೇಲೆ ಇಂಥದ್ದೊಂದು ಪ್ರಶ್ನೆ ಮೂಡುತ್ತದೆ.