ಬೆಂಗಳೂರು: ನಾಳೆ ಒಂದು ಗಂಟೆಯ ವೇಳೆಗೆ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶವು ಹೊರ ಬೀಳಲಿದೆ. ಕಾಂಗ್ರೆಸ್ ಸ್ಪಷ್ಟ ಬಹುಮತ ಬರುವುದು ಖಚಿತ. ಜೆಡಿಎಸ್ ನಾಯಕರು ಕಾರ್ಯಕರ್ತರಿಗೆ ಬಂದು ನನ್ನ ಸೇರಿಕೊಳ್ಳಿ ಅಂತ ಹೇಳುತ್ತಿದ್ದೇನೆ ಎಂಬುದಾಗಿ ಬಹಿರಂಗವಾಗಿ ಆಹ್ವಾನವನ್ನು ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೀಡಿದರು.
ಇಂದು ತಮ್ಮ ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನಗೆ ಎಕ್ಸಿಟ್ ಪೋಲ್ ಮೇಲೆ ನಂಬಿಕೆ ಇಲ್ಲ. ನನ್ನ ಸಂಖ್ಯೆ 141 ಎಕ್ಸಿಟ್ ಪೋಲ್ ನ ಸಂಖ್ಯೆ ಬಹಳ ಕಡಿಮೆ ಇದೆ. ನಮ್ಮ ಎಕ್ಸಿಟ್ ಪೋಲ್ ಸ್ಯಾಂಪಲ್ಸ್ ಹೆಚ್ಚಿದೆ. ಕಾಂಗ್ರೆಸ್ ಪರವಾಗಿ ದೊಡ್ಡ ಗಾಳಿ ಇದೆ. ಮೊದಲು ಹೆಚ್ಚು ತೋರಿಸಿದವರು 20 ಸೀಟ್ ಆಮೇಲೆ ಕಡಿಮೆ ತೋರಿಸಿದರು. ಯಾವ ಕಾರಣಕ್ಕೂ ಸಂಖ್ಯೆ ಕಡಿಮೆಯಾಗುವುದಿಲ್ಲ. ನಿಚ್ಚಳವಾದ ಬಹುಮತ ಕಾಂಗ್ರೆಸ್ ಪಕ್ಷಕ್ಕೆ ಬರುತ್ತದೆ.
ಬ್ಯಾಲೆಟ್ ಇಸ್ ಸ್ಟ್ರಾಂಗರ್ ದೆನ್ ದಿ ಬುಲೆಟ್. ಈ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಾಗ ಜನ ಹೇಗೆ ಬುಲೆಟ್ ಗೆ ಹೆದರಲಿಲ್ಲವೋ ಹಾಗೆ ಜನ ಈ ಬಾರಿ ಆಸೆ ಆಮಿಷಗಳಿಗೆ ಮನ್ನಣೆ ನೀಡಿಲ್ಲ. ನಾಳೆ ಒಂದು ಗಂಟೆ ಅಷ್ಟೊತ್ತಿಗೆ ಎಲ್ಲ ತೀರ್ಪು ಹೊರಬರಲಿದೆ ಎಂದರು.
ನಾನು ಪಕ್ಷಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದೇನೆ. ಜವಾಬ್ದಾರಿ ಕೊಟ್ಟ ದಿನದಿಂದ ನಾನೂ ಸರಿಯಾಗಿ ಮಲಗಿಲ್ಲ. ಮಲಗುವುದಕ್ಕೂ ಬಿಟ್ಟಿಲ್ಲ. ದಿನೇಶ್ ಗುಂಡೂರಾವ್ ಆಗಲ್ಲ ಅಂತ ಬಿಟ್ಟಾಗ ನನಗೆ ಜವಾಬ್ದಾರಿ ಕೊಟ್ಟರು. ನೈತಿಕ ಹೊಣೆ ಹೊತ್ತು ಎಲ್ಲರೂ ರಾಜೀನಾಮೆ ಕೊಟ್ಟಿದ್ರು. ಆಗ ನನಗೆ ಸೋನಿಯ ಗಾಂಧಿಯವರು ಜವಾಬ್ದಾರಿ ಕೊಟ್ಟರು. ಈಗ ಎಲ್ಲರೂ ನಮಗೆ ಸಹಕಾರ ಕೊಡ್ತಾರೆ. ಹಿರಿಯ, ಕಿರಿಯರೆಲ್ಲರೂ ಸಹಕಾರ ಕೊಡ್ತಾರೆ. ಉತ್ತಮವಾದ ಸರ್ಕಾರ ಕೊಡ್ತೇವೆ ಎಂದು ತಿಳಿಸಿದರು.
ಕುಮಾರಸ್ವಾಮಿ ಏನು ಹೇಳ್ತಾರೋ ಏನು ಮಾಡ್ತಾರೋ ಗೊತ್ತಿಲ್ಲ. ಮೈತ್ರಿ ಬಗ್ಗೆ ಅವರ ಮಾತು ಗೊತ್ತಿಲ್ಲ. ಕುಮಾರಣ್ಣ ಕಾರ್ಯಕರ್ತರಿಗೆ ಧೈರ್ಯ ತುಂಬಬೇಕು. ಹಾಗಾಗಿ ಹಾಗೆ ಮಾತನ್ನಾಡುತ್ತಾರೆ. ನಾನಂತೂ ಹೋರಾಟ ಮಾಡುವವನು. ಈಗಲೇ ರಾಜಕಾರಣದಿಂದ ನಿವೃತ್ತಿ ಆಗುವವನಲ್ಲ. ನಾನು ಕೊನೆ ಉಸಿರು ಇರುವ ತನಕ ಫೈಟ್ ಮಾಡುವವನು. ಜೆಡಿಎಸ್ ನಾಯಕರು ಕಾರ್ಯಕರ್ತರಿಗೆ ಬಂದು ನನ್ನ ಸೇರಿಕೊಳ್ಳಿ ಅಂತ ಹೇಳುತ್ತಿದ್ದೇನೆ ಎಂಬುದಾಗಿ ಬಹಿರಂಗವಾಗಿ ಆಹ್ವಾನ ನೀಡಿದರು.
ರೆಸಾರ್ಟ್ ರಾಜಕಾರಣ ಮುಗಿದು ಹೋಗಿದೆ. ಎಷ್ಟೇ ನಂಬರ್ ಬಂದರೂ ಸರ್ಕಾರ ಮಾಡುತ್ತೇವೆ ಅಂತ ಹೇಳಿದ್ದಾರಲ್ಲಾ ? ಎಲ್ಲ ಪಾರ್ಟಿಯವರು ಅವರವರ ಶಾಸಕರನ್ನು ಹಿಡಿದಿಟ್ಟುಕೊಳ್ತಾರೆ. ಯಾವ ಅಧಿಕಾರ ಹಂಚಿಕೆಯ ಮಾತೂ ಇಲ್ಲ. ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಏನು ಹೇಳ್ತಾರೋ ಹಾಗೆ ಕೇಳುತ್ತೇವೆ ಎಂದರು.
ಅಶೋಕ್ ಕಪ್ ನಮ್ಮದೇ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಪ್, ಟ್ರೋಫಿ ಎಲ್ಲವೂ ಅಶೋಕೇ ಮಾಡಿಕೊಳ್ಳಲಿ. ಆದರೇ ಸರ್ಕಾರ ಬರೋದು ಮಾತ್ರ ನಮ್ಮದೇ ಎಂಬುದಾಗಿ ಹೇಳುವ ಮೂಲಕ ಡಿ.ಕೆ ಶಿವಕುಮಾರ್ ಕೌಂಟರ್ ಕೊಟ್ಟರು.