ಕರ್ನಾಟಕದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಶನಿವಾರ ಭರ್ಜರಿ ಜಯ ದಾಖಲಿಸಿದೆ. 224 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿಗೆ 66 ಸ್ಥಾನಗಳ ವಿರುದ್ಧ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದುಕೊಂಡಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಮೂಲಸೌಕರ್ಯ ಸಂಬಂಧಿತ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಿರುವ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಅವರು ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ನಂತರ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಾರಣವಾದ ಮೂರು ಪ್ರಮುಖ ಮೆಟ್ರಿಕ್ಗಳನ್ನು ಉದ್ಯಮಿ ಹೇಳಿದ್ದಾರೆ. ಮೂಲಸೌಕರ್ಯ ಅಭಿವೃದ್ಧಿ, ಸಮೃದ್ಧ ಆರ್ಥಿಕತೆ ಮತ್ತು ಸಾಮಾಜಿಕ ಸಾಮರಸ್ಯವು ಜನರು ಮತದಾನ ಮಾಡುವಾಗ ಪರಿಶೀಲಿಸುವ ಮೂರು ಪ್ರಮುಖ ಮಾನದಂಡಗಳಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಲಾಸ್ ಏಂಜಲಿಸ್ನಲ್ಲಿ ನಾನಿರುವಂತಹ ಸಂದರ್ಭದಲ್ಲಿ ಕಾಂಗ್ರೆಸ್ಗೆ ಕರ್ನಾಟಕದ ಜನರಿಂದ ಜನಾದೇಶ ಬಂದ ಸುದ್ದಿ ಕೇಳಿ ಎಚ್ಚರವಾಯಿತು. ಮೂಲಸೌಕರ್ಯ ಅಭಿವೃದ್ಧಿ, ಆರ್ಥಿಕ ಸಮೃದ್ಧಿ ಮತ್ತು ಸಾಮಾಜಿಕ ಸಾಮರಸ್ಯವು ತನ್ನ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಜನರು ಪರಿಗಣಿಸುವ ಪ್ರಮುಖ ಅಂಶಗಳು” ಎಂದು ಅವರು ಟ್ವೀಟ್ ಮಾಡಿದ್ದಾರೆ.
“ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕೋಮುವಾದ ಬೆಳೆದರೆ ಭಾರತದ ಜಾಗತಿಕ ನಾಯಕತ್ವಕ್ಕೆ ಹಾನಿಯಾಗಲಿದೆ” ಎಂದು ಅವರು ಎಚ್ಚರಿಸಿದ್ದರು. ಕರ್ನಾಟಕವು ಆರ್ಥಿಕ ಅಭಿವೃದ್ಧಿಯನ್ನು ಹೊಂದಿದೆ. ಇಲ್ಲಿ ಕೋಮುವಾದಕ್ಕೆ ಅವಕಾಶ ನೀಡಬಾರದು. ಕರ್ನಾಟಕವು ಎಲ್ಲಾ ಸಮುದಾಯವನ್ನು ಒಳಗೊಂಡಿರುವ ಆರ್ಥಿಕ ಅಭಿವೃದ್ಧಿಯನ್ನು ಹೊಂದಿದೆ. ಮುಖ್ಯಮಂತ್ರಿ (ಆಗಿನ) ಬಸವರಾಜ ಬೊಮ್ಮಾಯಿಯವರೇ ದಯವಿಟ್ಟು ಕೋಮುಗಳ ನಡುವಿನ ವಿಭಜನೆಯನ್ನು ತಡೆಯಿರಿ” ಎಂದು ಅವರು ಈ ಹಿಂದೆ ಟ್ವೀಟ್ ಮಾಡಿದ್ದರು.
ಕಳೆದ ವರ್ಷ ಬೆಂಗಳೂರು ಮಳೆಯ ಅವಾಂತರದ ಸಂದರ್ಭದಲ್ಲಿಯೂ ಕಿರಣ್ ಮುಜುಂದಾರ್ ಶಾ ಅವರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಟ್ರಾಫಿಕ್ ಸಮಸ್ಯೆಯ ಸಂದರ್ಭದಲ್ಲಿ ಅಧಿಕಾರಿಗಳ ಕಾರ್ಯವೈಖರಿಯನ್ನೂ ಪ್ರಶ್ನಿಸಿದ್ದರು. “ಅಧಿಕಾರಿಗಳು ಬೆಂಗಳೂರಿನ ಸಂಚಾರ ವ್ಯವಸ್ಥೆಯ ಕುರಿತು ಕ್ರಮ ವಹಿಸುತ್ತಾರೆಯೇ. ಇಲ್ಲದಿದ್ದರೆ ನಾಗರಿಕರು ಅವರನ್ನು ಅವಮಾನಿಸುತ್ತಲೇ ಇರಬೇಕಾಗುತ್ತದೆ. ಎಲ್ಲದಕ್ಕೂ ನಾವು ರಾಜಕಾರಣಿಗಳು ದೂಷಿಸಲು ಸಾಧ್ಯವಿಲ್ಲ. ಗುತ್ತಿಗೆದಾರರು, ಅಧಿಕಾರಿಗಳು ಕೂಡ ಹೊಣೆಗಾರರು” ಎಂದು ಅವರು ಟ್ವೀಟ್ ಮಾಡಿದ್ದರು. ಪಣತ್ತೂರು ಆರ್ಯುಬಿ ಜಂಕ್ಷನ್ ಬಳಿ ಸ್ಥಳೀಯ ನಿವಾಸಿಯೊಬ್ಬರ ಪ್ರತಿಭಟನೆಯ ವಿಡಿಯೋಗೆ ಪ್ರತಿಕ್ರಿಯೆಯಾಗಿ ಬಯೋಕಾನ್ ಲಿಮಿಟೆಡ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಟ್ವೀಟ್ ಮಾಡಿದ್ದರು.