ಗೆಳತಿ ಗರ್ಭಪಾತ ಮಾಡಿಸಿಕೊಂಡಿದ್ದರಿಂದ ಕೋಪಗೊಂಡ ಪ್ರಿಯಕರನೋರ್ವ ಆಕೆಗೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
22 ವರ್ಷದ ಹೆರಾಲ್ಡ್ ಥಾಂಪ್ಸನ್ ತನ್ನ 26 ವರ್ಷದ ಗೆಳತಿ ಗೇಬ್ರಿಯೆಲಾನನ್ನು ಹತ್ಯೆ ಮಾಡಿದ್ದಾನೆ. ಹೆರಾಲ್ಡ್ ಗೆಳತಿಯನ್ನು ಸ್ಟ್ರಿಪ್ ಮಾಲ್ ಪಾರ್ಕಿಂಗ್ ಸ್ಥಳದಲ್ಲಿ ಗುಂಡಿಕ್ಕಿ ಕೊಲೆ ಮಾಡಿದ್ದಾನೆ ಎಂದು ಡಲ್ಲಾಸ್ ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಕೊಲೊರಾಡೊಗೆ ಸುಮಾರು 800 ಕಿ.ಮೀ ಪ್ರಯಾಣ ಬೆಳೆಸಿ ಹಿಂದಿನ ದಿನ ರಾತ್ರಿ ಬಂದಿದ್ದರು, ಅಲ್ಲಿ ಗರ್ಭಾವಸ್ಥೆಯ ಯಾವ ಹಂತದಲ್ಲಾದರೂ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿಸಲಾಗಿದೆ. ಟೆಕ್ಸಾಸ್ನಲ್ಲಿ, ವೈದ್ಯಕೀಯ ತುರ್ತುಸ್ಥಿತಿ ಸಂಭವಿಸದ ಹೊರತು ಸುಮಾರು ಆರು ವಾರಗಳ ನಂತರ ಗರ್ಭಪಾತವು ಕಾನೂನುಬಾಹಿರವಾಗಿದೆ.
ಪ್ರಿಯಕರನಿಗೆ ಆಕೆ ಗರ್ಭಪಾತ ಮಾಡಿಸಿಕೊಳ್ಳುವುದು ಇಷ್ಟವಿರಲಿಲ್ಲ ಎಂದು ತಿಳಿದುಬಂದಿದೆ. ಪಾರ್ಕಿಂಗ್ ಸ್ಥಳದಲ್ಲಿದ್ದ ಸಿಸಿಟಿವಿ ಗಮನಿಸಿದಾಗ ಬೆಳಗ್ಗೆ 7.30ರ ಸುಮಾರಿಗೆ ಅವರಿಬ್ಬರು ಜಗಳವಾಡಿಕೊಂಡಿದ್ದು ಬಳಿಕ ಆತ ಜೇಬಿನಿಂದ ಬಂದೂಕು ತೆಗೆದು ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.