ಬೆಂಗಳೂರು: ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಉದ್ಧೆಶದಿಂದ ನಾಳೆ ಒಕ್ಕಲಿಗರ ಸಂಘದಿಂದ (Vokkaliga Associa tion) ಫ್ರೀ ಡಂ ಪಾರ್ಕ್ ವರೆಗೂ ಹಮ್ಮಿಕೊಂಡಿದ್ದ ಜಾಥಾವನ್ನು ರದ್ದು ಮಾಡಲಾಗಿದೆ ಎಂದು ಕಿಮ್ಸ್ ಹಾಸ್ಪಿಟಲ್ ಮತ್ತು ಸಂಶೋಧನ ಕೇಂದ್ರದ ಅಧ್ಯಕ್ಷ ಉಮಾಪತಿ ತಿಳಿಸಿದರು.
ಡಿಕೆ ಶಿವಕುಮಾರ್ ಅವರು ಈ ರೀತಿ ಮಾಡಬಾರದು. ಇದು ಪಕ್ಷ ಸಿದ್ಧಾಂತಕ್ಕೆ ವಿರುದ್ಧವಾದದ್ದು ಎಂದು ರಿಕ್ವೆಸ್ಟ್ ಮಾಡಿದ್ದಾರೆ. ನನ್ನ ಗಮನಕ್ಕೆ ಬಾರದೆ ಯಾವುದೇ ಹೋರಾಟ ಮಾಡಬಾರದು. ಪಕ್ಷದಲ್ಲಿ ನಮ್ಮದೇ ಆದಂತಹ ತತ್ವ ಸಿದ್ದಾಂತಗಳು ಇರುತ್ತವೆ. ಅದಕ್ಕೆ ವಿರುದ್ದವಾಗಿ ನಡೆಯೋಕೆ ಸಾಧ್ಯ ಇಲ್ಲ ಅಂತ ಒಕ್ಕಲಿಗರ ಸಂಘಕ್ಕೆ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ ಎಂದರು.
ಹೋರಾಟ ಕೈ ಬಿಟ್ಟ ಒಕ್ಕಲಿಗರ ಸಂಘ
ಈ ಹಿನ್ನೆಲೆ ಹೋರಾಟ ರೂಪು ರೇಷೆಗಳನ್ನ ಒಕ್ಕಲಿಗರ ಸಂಘ ಕೈ ಬಿಟ್ಟಿದೆ. ಆದರೆ ನಿರ್ಮಾಲಾನಂದ ಹಾಗೂ ನಂಜಾವಧೂತ ಸ್ವಾಮೀಜಿಗಳ ತೀರ್ಮಾನದಂತೆ ಮಾಡುತ್ತೇವೆ. ಜಾಥಾ ಕೈ ಬಿಟ್ಟಿಲ್ಲ, ಆದರೆ ಮುಂದೂಡಿದ್ದೇವೆ ಅಷ್ಟೇ. ಮಾಡಬೇಡಿ ಅಂದ್ರು, ನಾವು ಮಾಡೇ ಮಾಡುತ್ತೇವೆ. ಸ್ವಾಮೀಜಿ ಹೇಳಲಿ ಅಂತ ಕಾಯುತ್ತಿದ್ದೇವೆ. ಅವರು ಹೇಳಿದ ಹಾಗೇ ನಾವು ಜಾಥಾ ಮಾಡುತ್ತೇವೆ ಎಂದು ತಿಳಿಸಿದರು.