ಬೆಂಗಳೂರು: ನಮ್ಮ ಸೋಲಿನ ಕಾರಣದ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನ ಆರ್ ಟಿ ನಗರದಲ್ಲಿ ಮಾತನಾಡಿದ ಅವರು, ಇಂದು ಸುಧಾಕರ್ ಭೇಟಿ ಮಾಡಿದ್ದೀನಿ, ಸೋಮಣ್ಣ ನವರನ್ನೂ ಭೇಟಿ ಮಾಡ್ತೀನಿ. ನಮ್ಮ ಜೊತೆ ಕೆಲಸ ಮಾಡಿದವರು ಅಲ್ಪ ಪ್ರಮಾಣದಲ್ಲಿ ಸೋತಿದ್ದಾರೆ. ಧೈರ್ಯ ತುಂಬುವ ಕೆಲಸ ಮಾಡ್ತಿದೀನಿ. ಸೋಲಿನ ಕಾರಣದ ಬಗ್ಗೆ ಚರ್ಚೆ ಮಾಡಿದ್ದೇವೆ.
ಸೋಮಣ್ಣ ಅವರನ್ನೂ ಭೇಟಿ ಮಾಡ್ತೀನಿ. ಏಕಾಯ್ತು , ಏನು ಅಂತ ಪರಾಮರ್ಶೆ ಮಾಡಿದ್ದೇವೆ ಎಂದರು. ಇನ್ನೂ ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನ ಹಗ್ಗಜಗ್ಗಾಟ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಅವರ ಪಕ್ಷದ ವಿಚಾರ ನೋಡೊಣ ನಾನು ಕಾಯ್ತಿದೀನಿ ಎಂದರು. ಇನ್ನೂ ಪ್ರವೀಣ್ ಸೂದ್ ಸಿಬಿಐ ನಿರ್ದೇಶಕರಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಕೇಂದ್ರ ಸರ್ಕಾರದ ನಿರ್ಧಾರ ಆಲ್ ಸರ್ವೀಸ್ ಅದು , ಅವರು ಮಾಡಿದ್ದಾರೆ ಎಂದು ಹಂಗಾಮಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.