ಬೆಂಗಳೂರು: ಕಾಂಗ್ರೆಸ್ ನಲ್ಲಿ ಸಿಎಂ ಆಯ್ಕೆ ವಿಚಾರವಾಗಿ ಮಾಜಿ ಡಿಸಿಎಂ ಪರಮೇಶ್ವರ್(Former DCM Parameshwar) ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಎಲ್ಲವು ಸುಸೂತ್ರವಾಗಿ ನಡೆಯುತ್ತೆ. ಹೈಕಮಾಂಡ್ ಪ್ರೊಸೆಸ್ ನಡೆಸುತ್ತಿದ್ದು, ಈಗಾಗಲೇ ಶಾಸಕರ ಅಭಿಪ್ರಾಯ ಪಡೆದಿದ್ದಾರೆ. ದೆಹಲಿಯಲ್ಲಿ ಸೋನಿಯಾ, ರಾಹುಲ್, ಅಧ್ಯಕ್ಷರು ಕೂತು ಚರ್ಚೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ನೀವು ಅಂದುಕೊಂಡ ಹಾಗೆ ದೊಡ್ಡ ಹೋರಾಟ ಆಗೊಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಧ್ಯಕ್ಷರಿಗೆ ಸ್ಥಾನ ಕೊಡಬೇಕು. ಇದು ಇರೋ ಪದ್ದತಿ. ಸಿದ್ದರಾಮಯ್ಯ ಸಿಎಲ್ ಪಿ ಲೀಡರ್ ಕೆಲಸ ಮಾಡಿದ್ದಾರೆ.
ಈ ಬಾರಿ ನಾವು ಸಾಮೂಹಿಕ ನಾಯಕತ್ವ ಅಂತ ಹೊಗಿದ್ವಿ. ಈಗ ಅಧಿಕಾರ ಬಂದಿದೆ ಹೈಕಮಾಂಡ್ ಯಾರು ಸಿಎಂ ಅಂತ ತೀರ್ಮಾನ ಮಾಡುತ್ತೆ ಎಂದರು. ಇನ್ನೂ ಸಿದ್ದರಾಮಯ್ಯ ಜೊತೆ ಶಾಸಕರು ಹೋಗಿ ಶಕ್ತಿ ಪ್ರದರ್ಶನ ಮಾಡ್ತಿರೋ ವಿಚಾರವಾಗಿ ಮಾತನಾಡಿ, ಅದು ಶಕ್ತಿ ಪ್ರದರ್ಶನ ಅಲ್ಲ ಕೆಲವು ಶಾಸಕರು ಅವರ ನಾಯಕರ ಜೊತೆ ಅಂತ ಹೋಗಿರುತ್ತಾರೆ. ಅದನ್ನ ಶಕ್ತಿ ಪ್ರದರ್ಶನ ಅನ್ನೋದು ಸರಿಯಲ್ಲ. ನಾವು ಬೇಕಾದ್ರು ಶಾಸಕರನ್ನ ಕಡೆದುಕೊಂಡು ಹೋಗಬಹುದು. ಆದರೆ ನಾವು ಹೋಗೊಲ್ಲ. ಕೆಲವರು ಹೋಗಿದ್ದಾರೆ ಅಷ್ಟೆ. ಅದಕ್ಕೆ ಶಕ್ತಿ ಪ್ರದರ್ಶನ ಅನ್ನೋದು ಸರಿಯಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.