ಲಾಹೋರ್: ಭ್ರಷ್ಟಚಾರ ಪ್ರಕರಣದಲ್ಲಿ ಬಂಧನಕೊಳಗಾಗಿ ಬಿಡುಗಡೆ ಆಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ, ತೆಹ್ರೀಕ್-ಎ-ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್ ಸಲ್ಲಿಸಿದ ಅರ್ಜಿಯ ಮೇಲಿನ ತೀರ್ಪನ್ನು ಲಾಹೋರ್ ಹೈಕೋರ್ಟ್ ಕಾಯ್ದಿರಿಸಿದೆ.
ಅಲ್ ಖಾದಿರ್ ಟ್ರಸ್ಟ್ ಕೇಸ್ ಪ್ರಕರಣದಲ್ಲಿ ಬಂಧಿತರಾಗಿದ್ದಂದಿನಿಂದ ಅವರ ವಿರುದ್ಧ ದಾಖಲಾಗಿರುವ ಪ್ರತಿಯೊಂದು ಪ್ರಕರಣಕ್ಕೂ ಇದು ಅನ್ವಯಿಸುತ್ತದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಭೂ ಹಗರಣ ಪ್ರಕರಣದಲ್ಲಿ ಖಾನ್ ಅವರ ಬಂಧನದ ನಂತರ ಪ್ರತಿಭಟನೆಗಳು ಹುಟ್ಟಿಕೊಂಡ ಹಿನ್ನೆಲೆಯಲ್ಲಿ, ಮಾಜಿ ಪ್ರಧಾನಿ ವಿರುದ್ಧ ಇತರ ಪ್ರಕರಣಗಳನ್ನು ಸಹ ದಾಖಲಿಸಲಾಯಿತು. ಏತನ್ಮಧ್ಯೆ, ವಿಚಾರಣೆಯ ಆರಂಭದಲ್ಲಿ ಪಿಟಿಐ ಮುಖ್ಯಸ್ಥರ ಗೈರುಹಾಜರಿಯ ಬಗ್ಗೆ ನ್ಯಾಯಾಲಯವು ವಿಚಾರಿಸಿತು, ಖಾನ್ ಅವರ ವಕೀಲರು ತಮ್ಮ ಕಕ್ಷಿದಾರರು ಬೆಳಿಗ್ಗೆ 11 ಗಂಟೆಗೆ ನ್ಯಾಯಾಲಯಕ್ಕೆ ಹಾಜರಾಗುತ್ತಾರೆ ಎಂದು ಪ್ರತಿಕ್ರಿಯಿಸಿದರು.
ಪಂಜಾಬ್ನ ಹಂಗಾಮಿ ವಕೀಲರ ಮಧ್ಯಂತರ ಸರ್ಕಾರವು ಇಮ್ರಾನ್ ಖಾನ್ ಅವರ ಜಾಮೀನು ವಿನಂತಿಯನ್ನು ವಿರೋಧಿಸಿದ್ದು, ಇದು ಸ್ವೀಕಾರಾರ್ಹವಲ್ಲ ಎಂದು ಪ್ರತಿಪಾದಿಸಿತ್ತು. ಜಿಯೋ ನ್ಯೂಸ್ ಪ್ರಕಾರ, ಇಮ್ರಾನ್ ಖಾನ್ ಅವರು ನ್ಯಾಯಾಲಯಕ್ಕೆ ಹಾಜರಾಗಿಲ್ಲ ಮತ್ತು ರಕ್ಷಣಾತ್ಮಕ ಜಾಮೀನು ಕೋರಿಲ್ಲ ಎಂದು ವಕೀಲರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಮ್ರಾಣ್ ಖಾನ್ ಅವರ ವಕೀಲರು, ಪಿಟಿಐ ಮುಖ್ಯಸ್ಥರು ಬಂಧನ ಪೂರ್ವ ಜಾಮೀನು ಬಯಸುತ್ತಿದ್ದಾರೆಯೇ ಹೊರತು ರಕ್ಷಣಾತ್ಮಕ ಜಾಮೀನು ಅಲ್ಲ ಎಂದು ವಾದಿಸಿದರು. ಅದೇ ವೇಳೆ ಪ್ರಕರಣವನ್ನು ದೊಡ್ಡ ಪೀಠಕ್ಕೆ ಕಳುಹಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಖಾನ್ ತನ್ನ ವಿರುದ್ಧ ದಾಖಲಾದ ಎಲ್ಲಾ ಹೊಸ ಪ್ರಕರಣಗಳ ವಿರುದ್ಧ ಇಸ್ಲಾಮಾಬಾದ್ ಹೈಕೋರ್ಟ್ ನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಒಂದು ದಿನದ ನಂತರ ಅಂದರೆ ಶನಿವಾರದಂದು ಅರ್ಜಿ ಸಲ್ಲಿಸಿದ್ದರು.
ಜಿಯೋ ನ್ಯೂಸ್ ಪ್ರಕಾರ, ನನ್ನನ್ನು ರಾಜಕೀಯವಾಗಿ ಬಲಿಪಶು ಮಾಡಲಾಗುತ್ತಿದೆ. ಪೊಲೀಸರು ನನ್ನನ್ನು ಹಲವಾರು ಪ್ರಕರಣಗಳಲ್ಲಿ ಹೆಸರಿಸಿದ್ದರಿಂದ ಬಂಧನದ ಅಪಾಯವಿದೆ ಎಂದು ಖಾನ್ ಮನವಿಯಲ್ಲಿ ಹೇಳಿದ್ದಾರೆ.