ನಿರ್ದೇಶಕರ ಅದೃಷ್ಟದ ನಟಿಯಾಗಿದ್ದ ನಟಿ ಪೂಜಾ ಹೆಗ್ಡೆ ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಸೋಲು ಅನುಭವಿಸುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳ ಸೋಲಿನಿಂದ ಬೆಸತ್ತಿರೋ ಪೂಜಾ ಹೆಗ್ಡೆ ಇದೀಗ ಹೊಸ ನಿರ್ಧಾರವೊಂದನ್ನ ತೆಗೆದುಕೊಂಡಿದ್ದಾರೆ. ಸಿನಿಮಾಗಳ ಸೋಲಿನ ಬಳಿಕ ಪೂಜಾ ಐಟಂ ಹಾಡಿಗೆ ಹೆಜ್ಜೆ ಹಾಕಲು ನಿರ್ಧಾರಿಸಿದ್ದಾರೆ.
ಅಲ್ಲು ಅರ್ಜುನ್ ಜೊತೆ ‘ಅಲ್ಲಾ ವೈಕುಂಠಪುರಂ’ ಸಿನಿಮಾದಲ್ಲಿ ನಾಯಕಿಯಾಗಿ ಸಕ್ಸಸ್ ಕಂಡ ಪೂಜಾ ಹೆಗ್ಡೆಗೆ ಸಾಲು ಸಾಲು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಸಿನಿಮಾ ಆಯ್ಕೆಗಳಲ್ಲಿ ಪೂಜಾ ಎಡವಿದ್ರಾ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ. ‘ಅಲ್ಲಾ ವೈಕುಂಠಪುರಂ’ ಚಿತ್ರದ ನಂತರ ಪೂಜಾ ನಟಿಸಿದ ಅಷ್ಟೂ ಸಿನಿಮಾಗಳು ಚಿತ್ರಮಂದಿರದಲ್ಲಿ ಮಕಾಡೆ ಮಲಗಿತ್ತು.
ಇತ್ತೀಚಿಗೆ ‘ಕಿಸಿ ಕಾ ಭಾಯ್ ಕಿಸಿ ಕೀ ಜಾನ್’ ಚಿತ್ರ ಕೂಡ ಫ್ಲಾಪ್ ಆಗಿದೆ. ಸಲ್ಮಾನ್ ಖಾನ್ಗೆ ಜೋಡಿಯಾಗಿ ಪೂಜಾ ನಟಿಸಿದ್ದರು. ಆದರೆ ಆ ಸಿನಿಮಾ ಕೂಡ ಬಾಕ್ಸ್ ಆಪೀಸ್ ನಲ್ಲಿ ಸೋಲು ಕಂಡಿತ್ತು. ಇದೇ ಕಾರಣಕ್ಕೆ ಪೂಜಾ ಐಟಂ ಹಾಡಿಗೆ ಹೆಜ್ಜೆ ಹಾಕಲು ಮುಂದಾಗಿದ್ದಾರೆ.
ನಾಯಕಿಯರು ಕೂಡ ಐಟಂ ಡ್ಯಾನ್ಸ್ ಮಾಡಿ ಸಕ್ಸಸ್ ಕಂಡವರು ಇದ್ದಾರೆ. ದೀಪಿಕಾ ಪಡುಕೋಣೆ, ಸಮಂತಾ, ಕತ್ರಿನಾ ಕೈಫ್ ಸೇರಿದಂತೆ ಐಟಂ ಹಾಡಿಗೆ ಸೊಂಟ ಬಳುಕಿಸಿ ಗೆದ್ದಿದ್ದಾರೆ. ಇದೀಗ ಇದೇ ಹಾದಿಗೆ ಪೂಜಾ ಹೆಗ್ಡೆ ಹೆಜ್ಜೆ ಇಟ್ಟಿದ್ದಾರೆ. ಐಟಂ ಡ್ಯಾನ್ಸ್ ತೀರ್ಮಾನ ಮಾಡಿದ್ದಾರೆ.