ಸ್ಯಾಂಡಲ್ವುಡ್ನ ಬೆಸ್ಟ್ ಜೋಡಿ ಎನಿಸಿಕೊಂಡಿರುವ ಲವ್ಲಿ ಸ್ಟಾರ್ ಪ್ರೇಮ್ ಹಾಗೂ ಜ್ಯೋತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು 25 ವರ್ಷ ಕಳೆದಿದೆ. ಇದೇ ಖುಷಿಯಲ್ಲಿ ಪ್ರೇಮ್ ದಂಪತಿ ಬಾಲಿಗೆ ಹಾರಿದ್ದು ಅಲ್ಲಿನ ಸುಂದರ ಕ್ಷಣಗಳ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮನೆಯವರ ವಿರೋದದ ನಡುವೆಯೂ ಪ್ರೇಮ್- ಜ್ಯೋತಿ ಒಬ್ಬರನೊಬ್ಬರು ಪ್ರೀತಿಸಿ ಮದುವೆಯಾಗಿದ್ದರು. 2000ರಲ್ಲಿ ಪ್ರೇಮ್, ಜ್ಯೋತಿ ಜೊತೆ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸಾಕಷ್ಟು ಸಂಕಷ್ಟಗಳ ನಡುವೆ ನಟ ಪ್ರೇಮ್ ಚಿತ್ರರಂಗದಲ್ಲಿ ಗಟ್ಟಿ ನಟನಾಗಿ ಸ್ಥಾನ ಗಿಟ್ಟಿಸಿಕೊಂಡರು. ಪ್ರೇಮ್ ಶ್ರಮಕ್ಕೆ ಪತ್ನಿ ಜ್ಯೋತಿ ಅವರ ಕೊಡುಗೆ ಅಪಾರ.
ಪ್ರೀತಿಸಿ ಮದುವೆಯಾಗಿ 25 ವರ್ಷಗಳು ಕಳೆದರೂ ಇಬ್ಬರ ನಡುವೆ ಪ್ರೀತಿ ಮಾಸಿಲ್ಲ. ನವಜೋಡಿಗಳಿಗೆ ನಾಚುವಂತೆ ಇಂದಿಗೂ ಇಬ್ಬರು ಜೊತೆಯಾಗಿ ಪ್ರೇಮ್- ಜ್ಯೋತಿ ಜೀವನ ಸಾಗಿಸುತ್ತಿದ್ದಾರೆ. ಸದ್ಯ ಪತ್ನಿ ಜೊತೆಗಿನ ಬಾಲಿ ಫೋಟೋ ಹಂಚಿಕೊಂಡು ನಟ ಪ್ರೇಮ್ ವಿಶ್ ಮಾಡಿದ್ದಾರೆ. ಬಾಲಿಯಲ್ಲಿ 25ನೇ ವರ್ಷ ವಿವಾಹ ಮಹೋತ್ಸವ ಕಾರ್ಯಕ್ರಮವನ್ನ ರೊಮ್ಯಾಂಟಿಕ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ.