ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ರಶ್ಮಿಕಾ ಮಂದಣ್ಣ ಇದೀಗ ಪರಭಾಷೆಯಲ್ಲೂ ಖ್ಯಾತಿ ಘಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ 3.8 ಕೋಟಿ ಹಿಂಬಾಲಕರಿದ್ದಾರೆ. ಈ ಮಧ್ಯೆ ರಶ್ಮಿಕಾ ಕಂಡ ತಕ್ಷಣ ಆಕೆಯ ಬಳಿ ಸೆಲ್ಫಿ ತೆಗೆದುಕೊಳ್ಳಲು ಸಾಕಷ್ಟು ಮಂದಿ ಮುಗಿ ಬೀಳುತ್ತಾರೆ. ಇದೀಗ ಅಂಥದ್ದೇ ಪ್ರಸಂಗವೊಂದು ಎದುರಾಗಿದೆ.
ರಶ್ಮಿಕಾ ಅಭಿಮಾನಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಸೆಲ್ಫಿ ಕೇಳಿದರೆ ಬೇಸರ ಇಲ್ಲದೆ ಪೋಸ್ ಕೊಡುತ್ತಾರೆ. ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ರಶ್ಮಿಕಾ ಮರಳಿ ಬರುವಾಗ ಅಭಿಮಾನಿಯೋರ್ವ ಸೆಲ್ಫಿ ಕೇಳಲು ಬಂದಿದ್ದಾನೆ. ರಶ್ಮಿಕಾ ಸೆಲ್ಫಿಗೆ ಪೋಸ್ ಕೊಡೋಕೆ ರೆಡಿ ಆದರು. ಆದರೆ ಈ ವೇಳೆ ಅಭಿಮಾನಿಯನ್ನು ರಶ್ಮಿಕಾ ಬಾಡಿಗಾರ್ಡ್ ಪಕ್ಕಕ್ಕೆ ತಳ್ಳಿದ್ದು ಈ ವಿಡಿಯೋ ವೈರಲ್ ಆಗಿದೆ.
ಬಾಡಿಗಾರ್ಡ್ ವರ್ತನೆ ನೋಡಿ ರಶ್ಮಿಕಾ ಮಂದಣ್ಣಗೆ ಶಾಕ್ ಆಗಿದೆ. ಮುಂದಕ್ಕೆ ನಡೆಯುತ್ತಾ ಅವರು ಹಿಂದಕ್ಕೆ ತಿರುಗಿ ನೋಡಿದ್ದಾರೆ. ಆದರೆ, ಆ ವ್ಯಕ್ತಿ ಕಾಣಿಸಿಲ್ಲ. ಬಳಿಕ ಬಂದ ಯುವತಿಗೆ ರಶ್ಮಿಕಾ ಸೆಲ್ಫಿ ನೀಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಾಡಿಗಾರ್ಡ್ ಈ ರೀತಿ ಮಾಡಬಾರದಿತ್ತು ಎನ್ನುವ ಅಭಿಪ್ರಾಯ ಅನೇಕರಿಂದ ವ್ಯಕ್ತವಾಗಿದೆ.