ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ನಟಿ ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್ ಎಂದೇ ಖ್ಯಾತಿ ಘಳಿಸಿದ್ದಾರೆ. ಸಾಲು ಸಾಲು ಚಿತ್ರಗಳು ಹಿಟ್ ಆದ ಹಿನ್ನೆಲೆಯಲ್ಲಿ 2020ರಲ್ಲಿ ಗೂಗಲ್ ನ್ಯಾಷನಲ್ ಕ್ರಶ್ ಟ್ರೆಂಡಿಂಗ್ ಪಟ್ಟವನ್ನು ರಶ್ಮಿಕಾಗೆ ನೀಡಿತ್ತು. ಇದೀಗ ಆ ಪಟ್ಟವನ್ನು ಮತ್ತೋರ್ವ ನಟಿ ಕಿತ್ತುಕೊಂಡಿದ್ದಾರೆ.
ಈ ಬಾರಿಯ ಕಾನ್ ಚಿತ್ರೋತ್ಸವದಲ್ಲಿ ಮೃಣಾಲ್ ಭಾಗಿಯಾಗಿದ್ದಾರೆ. ಕಾನ್ ಫೆಸ್ಟಿವೆಲ್ ನಲ್ಲಿ ಭಾಗಿಯಾದ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳು ವೈರಲ್ ಆಗಿದ್ದು, ನೆಟ್ಟಿಗರು ಮೃಣಾಲ್ ಗೆ ನ್ಯಾಷನಲ್ ಕ್ರಶ್ ಎಂದು ಕರೆದಿದ್ದಾರೆ. ಅದು ಟ್ರೆಂಡ್ ಕೂಡ ಆಗಿದೆ. ಹೀಗಾಗಿ ರಶ್ಮಿಕಾ ಹೆಸರಿನಲ್ಲಿದ್ದ ಆ ಪಟ್ಟ ಇದೀಗ ಮೃಣಾಲ್ ಪಾಲಾಗಿದೆ.
ಟಾಲಿವುಡ್ ನ ಸೀತಾ ರಾಮಂ ಸಿನಿಮಾದ ಮೂಲಕ ಗಮನ ಸೆಳೆದವರು ಮೃಣಾಲ್ ಮೊದಲ ಚಿತ್ರದಲ್ಲೆ , ಸಾಕಷ್ಟು ಖ್ಯಾತಿ ಘಳಿಸಿದ್ದರು. ಈ ಸಿನಿಮಾದಲ್ಲಿನ ನಟನೆಗೆ ಬಹುತೇಕರು ಫಿದಾ ಆಗಿದ್ದರು. ಆ ಸಿನಿಮಾನೇ ಇಂದು ಕಾನ್ ಚಿತ್ರೋತ್ಸವಕ್ಕೆ ಹೋಗುವಂತೆ ಮಾಡಿದೆ. ಅಲ್ಲದೇ, ಮೃಣಾಲ್ ಧರಿಸಿದ್ದ ಕಾಸ್ಟ್ಯೂಮ್ ಕೂಡ ಟ್ರೆಂಡ್ ಆಗಿದ್ದು, ಇದೇ ಕಾರಣಕ್ಕೆ ರಶ್ಮಿಕಾ ಮತ್ತು ಮೃಣಾಲ್ ನಡುವೆ ಪೈಪೋಟಿ ಏರ್ಪಟ್ಟಿದೆ.
ಇದುವರೆಗೂ ರಶ್ಮಿಕಾ ಹೆಸರಿನಲ್ಲಿದ್ದ ನ್ಯಾಷನಲ್ ಕ್ರಶ್ ಪಟ್ಟ ಇದೀಗ ನಟಿ ಮೃಣಾಲ್ ಠಾಕೂರ್ ಪಾಲಾಗಿದೆ.