ಬೆಂಗಳೂರು: ಬಿಬಿಎಂಪಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕ್ಷೀಣಿಸುತ್ತಿರುವುದನ್ನು ಮನಗಂಡ ಪಾಲಿಕೆ ಈ ಬಗ್ಗೆ ಒಂದು ನಿರ್ಧಾರಕ್ಕೆ ಬಂದಿದೆ. ಪಾಠ ಮಾಡಲು ಬೇಕಾದ ಅರ್ಹತೆಯಿಲ್ಲದ 200ಕ್ಕೂ ಹೆಚ್ಚು ಹೊರ ಗುತ್ತಿಗೆ ಶಿಕ್ಷಕರಿಗೆ ಗೇಟ್ ಪಾಸ್ ನೀಡಲು ಮುಂದಾಗಿದೆ. ಬಿಬಿಎಂಪಿ ಸೂಚನೆ ನೀಡಿದರೂ ಕೂಡ ಟಿಇಟಿ (ಶಿಕ್ಷಕರ ಅರ್ಹತಾ ಪರೀಕ್ಷೆ) ಪಾಸ್ ಮಾಡದ ಹೊರ ಗುತ್ತಿಗೆ ಶಿಕ್ಷಕರಿಗೆ ಕೊಕ್ ನೀಡಲಿದೆ.ಕಳೆದ ವರ್ಷವೇ ಅನರ್ಹ ಹೊರ ಗುತ್ತಿಗೆ ಶಿಕ್ಷಕರಿಗೆ ಗೇಟ್ ಪಾಸ್ ನೀಡಲು ಬಿಬಿಎಂಪಿ ಮುಂದಾಗಿತ್ತು.
ಆದ್ರೆ ಹೊರ ಗುತ್ತಿಗೆ ಶಿಕ್ಷಕರು ಕಾಲಾವಕಾಶ ಕೇಳಿದ ಕಾರಣ ಒಂದು ವರ್ಷ ಮುಂದೂಡಲಾಗಿತ್ತು. ಸದ್ಯ ಬಿಬಿಎಂಪಿಯ ಶಾಲೆ ಹಾಗೂ ಪಿಯು ಕಾಲೇಜುಗಳು ಜೂನ್ ತಿಂಗಳಲ್ಲಿ ಪುನಾರಂಭ ಆಗಲಿವೆ. ಪಾಲಿಕೆಯ 163 ಶಾಲಾ ಕಾಲೇಜುಗಳಲ್ಲಿ 728 ಹೊರ ಗುತ್ತಿಗೆ ಶಿಕ್ಷಕರಿದ್ದಾರೆ. ಈ ಪೈಕಿ 200ಕ್ಕೂ ಹೆಚ್ಚು ಬೋಧಕರು ಅರ್ಹತೆ ಹೊಂದಿಲ್ಲ.
ಹೀಗಾಗಿ ದಾಖಲಾತಿ ಪರಿಶೀಲನೆಗೆ ಬಿಬಿಎಂಪಿ ಮುಂದಾಗಿದ್ದು 15 ದಿನ ದಾಖಲೆ ಪರಿಶೀಲನೆ ನಡೆಸಿ, ಅರ್ಹತೆಯಿಲ್ಲದವರಿಗೆ ಗೇಟ್ ಪಾಸ್ ನೀಡಲು ನಿರ್ಧರಿಸಿದೆ. ನೇಮಕಾತಿ ಪರಿಶೀಲನೆ ವೇಳೆ ಟಿಇಟಿ ಸರ್ಟಿಫಿಕೇಟ್ ಪರಿಶೀಲನೆ ಮಾಡಲಾಗುತ್ತೆ. ಪ್ರೌಡ ಶಾಲೆ ಹಾಗೂ ಕಾಲೇಜಿಗೂ ಕೂಡ ಬೇಕಾದ ಅರ್ಹತೆಯಿಲ್ಲದಿದ್ದರು ಗೇಟ್ ಪಾಸ್ ಮಾಡಲಾಗುತ್ತೆ. ಸದ್ಯ ಬಿಬಿಎಂಪಿ ನಿರ್ಧಾರಕ್ಕೆ ಶಿಕ್ಷಕರು ಕಂಗಾಲಾಗಿದ್ದಾರೆ.