ಮುಂಬೈ: ಮಸ್ಕತ್ನಿಂದ (Muscat) ಭಾರತಕ್ಕೆ (India) ಅಕ್ರಮವಾಗಿ ಸಾಗಿಸುತ್ತಿದ್ದ 2.28 ಕೋಟಿ ರೂ. ಮೌಲ್ಯದ 4.2 ಕೆಜಿ ಚಿನ್ನದ ಧೂಳನ್ನು (Gold Dust) ವಶಪಡಿಸಿಕೊಂಡಿರುವ ಘಟನೆ ಮುಂಬೈನಲ್ಲಿ (Mumbai) ನಡೆದಿದೆ.
ಮಸ್ಕತ್ನಿಂದ ಆಗಮಿಸಿದ ಭಾರತೀಯ ಪ್ರಜೆಯೊಬ್ಬರು ಚಿನ್ನದ ಧೂಳನ್ನು ಅಕ್ರಮವಾಗಿ ಸಾಗಿಸುತ್ತಿದ್ದು, ಅದನ್ನು ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಚಿನ್ನದ ಧೂಳಿನ ಬೆಲೆ ಸುಮಾರು 2.28 ಕೋಟಿ ರೂ. ಗಳಾಗಿದ್ದು, ವ್ಯಕ್ತಿ ತನ್ನ ಜೀನ್ಸ್, ಒಳ ಉಡುಪು ಮತ್ತು ಮೊಣಕಾಲಿನ ಕ್ಯಾಪ್ಗಳ ಒಳಗೆ ಹೊಲಿದ ಪ್ಯಾಕೆಟ್ಗಳಲ್ಲಿ ತುಂಬಿಸಿ ಸಾಗಿಸುತ್ತಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್ ವ್ಯಕ್ತಿಯಿಂದ ಚಿನ್ನವನ್ನು ವಶಪಡಿಸಿಕೊಳ್ಳುತ್ತಿರುವ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕುರಿತು ತನಿಖೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗಿದೆ.