ಚಿತ್ರದುರ್ಗ: ಉಪ್ಪಾರ ಸಮಾಜದ ಶಾಸಕರಿಗೆ ಮಂತ್ರಿ ಸ್ಥಾನ ನೀಡುವಂತೆ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿರುವ ಭಗೀರಥ ಮಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಆಗ್ರಹಿಸಿದ್ದಾರೆ. ಚಾಮರಾಜನಗರ ಶಾಸಕ, ಹಿಂದುಳಿದ ಸಮುದಾಯದ ಪುಟ್ಟರಂಗಶೆಟ್ಟಿ ಅವರಿಗೆ ಸಂಪುಟ ದರ್ಜೆ, ಉತ್ತಮ ಖಾತೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ನಮ್ಮ ಸಮುದಾಯದಿಂದ 3 ಜನ ಶಾಸಕರಿದ್ದಾರೆ. ಹೀಗಾಗಿ ಸಚಿವ ಸ್ಥಾನ ಕೊಡುವಂತೆ ಕೇಳಿದ್ದೇನೆ. ಬಸವಣ್ಣನವರ ಪಾಲನೆ ಸಂಪುಟದಲ್ಲಿ ಆಗಬೇಕು. ಸಾಮಾಜಿಕ ನ್ಯಾಯದಡಿ ನಮ್ಮ ಸಮುದಾಯಕ್ಕೂ ಮಂತ್ರಿಗಿರಿ ಕೊಡಬೇಕು. ಸಾಮಾಜಿಕ ನ್ಯಾಯದಡಿ ಕೊಡುತ್ತೇವೆ ಅಂತಾ ಡಿಕೆ ಶಿವಕುಮಾರ್ ಹೇಳಿದ್ದಾರೆ. ಸಚಿವ ಸ್ಥಾನ ಕೊಡುವ ವಿಶ್ವಾಸವಿದೆ. ನಮ್ಮ ಸಮುದಾಯದ ಪರವಾಗಿ ಸ್ವಾಮೀಜಿಗಳು ಕೇಳುವುದು ತಪ್ಪಿಲ್ಲ ಎಂದರು. ಅಲ್ಲದೆ ನಿರ್ಲಕ್ಷಿಸಿದರೆ ಜನ ಮುಂದಿನ ತೀರ್ಮಾನ ಮಾಡುತ್ತಾರೆಂದು ಎಚ್ಚರಿಕೆ ನೀಡಿದ್ದಾರೆ.