ಬೆಂಗಳೂರು: ನಾನು ಯಾರಿಗೂ ಉಪಮುಖ್ಯಮಂತ್ರಿ ಸ್ಥಾನ ಕೊಡಿ ಅಂತ ಮಾತಾಡಿಲ್ಲ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರ ಬೇರೆ ನಿಲುವು ಸರಿಯಾಗಿದೆ. ಎಲ್ಲಾವು ಒಳ್ಳೆಯದಾಗಿ ಕಾಣಿಸುತ್ತಿದೆ. ನಾವು ಜನರಿಗೆ ಏನು ಭರವಸೆ ನೀಡಿದ್ದೇವೆ ಅದನ್ನ ಇಡೇರಿಸಬೇಕು. ಜನ ಹೇಳುವುದು ನಾವು ಹೇಳುವುದು ಮುಖ್ಯ ಅಲ್ಲ. ನಿನ್ನೆ ಸಿದ್ದರಾಮಯ್ಯರನ್ನು ವಿಶ್ ಮಾಡುವುದಕ್ಕೆ ಹೋಗಿದ್ದೆ ಎಂದು ದ್ದರಾಮಯ್ಯ ನಿವಾಸದಲ್ಲಿ ಡಾ ಜಿ ಪರಮೇಶ್ವರ್ ಹೇಳಿದರು.ವಿಧಾನಸಭೆ ಚುನಾವಣೆ ಫಲಿತಾಂಶ (Karnataka Assembly Election Result) ಮೇ 13ರಂದು ಪ್ರಕಟವಾಗಿದ್ದು,
ಮರುದಿನ ನಡೆದ ಪ್ರಥಮ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕನ ಆಯ್ಕೆ ಕುರಿತು ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಸಭೆಯ ನಿರ್ಣಯದಂತೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಕರೆಸಿಕೊಂಡು ಹಲವು ಸುತ್ತಿನ ಸಭೆ ನಡೆಸಿದ್ದರು. ನಾಲ್ಕು ದಿನಗಳ ರಾಜಿ ಸಂಧಾನದ ಮಾತುಕತೆಯು ಸೋನಿಯಾ ಗಾಂಧಿ ಮಧ್ಯ ಪ್ರವೇಶದ ಬಳಿಕ ಸುಖಾಂತ್ಯ ಕಂಡಿದೆ. ಅಧಿಕೃತವಾಗಿ ಗುರುವಾರ ಮಧ್ಯಾಹ್ನ ಸಿದ್ದರಾಮಯ್ಯರನ್ನು ಸಿಎಂ ಮತ್ತು ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಎಂದು ಘೋಷಿಸಲಾಯಿತು.