ಬೆಂಗಳೂರು: ‘ಅಧಿಕಾರಕ್ಕೆ ಬರಲು ವೀರಶೈವ ಲಿಂಗಾಯತ ಸಮುದಾಯವನ್ನ ಮೆಟ್ಟಿಲಾಗಿಸಿಕೊಂಡು, ಈಗ ಕಾಂಗ್ರೆಸ್ ಮರೆತಿದೆ, ಜೊತೆಗೆ ಸಮುದಾಯದ ಹಿರಿಯ ನಾಯಕರೂ ಈಗ ಮೌನ ತಾಳಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ, ಶಾಸಕ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ 39 ಶಾಸಕರು ಗೆದ್ದಿದ್ದರೂ, ಉನ್ನತ ಸ್ಥಾನ ಕೇಳುವಲ್ಲಿ ಸಮುದಾಯದಿಂದ ಗಟ್ಟಿ ಧ್ವನಿ ಕೇಳಿಸುತ್ತಿಲ್ಲ.
ಈಗ ಕಾಂಗ್ರೆಸ್ ಮುಖವಾಡ ಶಾಶ್ವತವಾಗಿ ಕಳಚಿ ಬಿದ್ದಿದೆ. ಸಮುದಾಯವನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಂಡಿದೆ ಎಂದರು. ಅಲ್ಲದೇ ಸಮುದಾಯಕ್ಕೆ ನ್ಯಾಯ ಕೊಡದೆ ವಂಚಿಸಿದೆ. ಬಿಜೆಪಿ ಒಂದೇ ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸಿದ್ದು, ಬಸವಣ್ಣನ ಆಶಯಗಳಿಗೆ ತಕ್ಕಂತೆ ನ್ಯಾಯ ಒದಗಿಸುವ ಪಕ್ಷವಾಗಿದೆ. ರಾಜ್ಯದ ಜನತೆ ಮತ್ತೆ ಬಿಜೆಪಿಯನ್ನು ಬೆಂಬಲಿಸುವ ವಿಶ್ವಾಸ ಇದೆ ಎಂದು ಟ್ವೀಟ್ ಮಾಡಿದ್ದಾರೆ.